March 7, 2026
ಅಪರಾಧ ಸುದ್ದಿ

ಪಟ್ರಮೆ ಪಟ್ಟೂರಿನ ನೆರೆಕರೆಯ ಇಬ್ಬರು ಯುವತಿಯರು ಒಂದೇ ದಿನ ಮೃತ್ಯು: ಹೊಟ್ಟೆನೋವಿನಿಂದ ಅಸ್ವಸ್ಥಗೊಂಡಿದ್ದ ರಕ್ಷಿತಾ ಹಾಗೂ ಲಾವಣ್ಯ


ಪಟ್ರಮೆ : ಹೊಟ್ಟೆನೋವಿನಿಂದ ನರಳಿ ಆಸ್ಪತ್ರೆಗೆ ದಾಖಲಾದ ನೆರೆಕರೆಯ ಮನೆಯ ಇಬ್ಬರು ಯುವತಿಯರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ದಾರುಣ ಘಟನೆ ಎ.6 ರಂದು ವರದಿಯಾಗಿದೆ.
ಪಟ್ರಮೆ ಗ್ರಾಮದ ಪಟ್ಟೂರು ಬಾಬು ಎಂಬವರ ಪುತ್ರಿ ರಕ್ಷಿತಾ ( 22ವ) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟರೆ, ಅವರ ನೆರೆ ಮನೆಯವರಾದ ಶ್ರೀನಿವಾಸ ಆಚಾರ್ಯ ಎಂಬವರ ಪುತ್ರಿ ಲಾವಣ್ಯ (21ವ) ಸುರತ್ಕಲ್ ಆಸ್ಪತ್ರೆಯಲ್ಲಿ ಮಧ್ಯಾಹ್ನ ಮೃತಪಟ್ಟರೆನ್ನಲಾಗಿದೆ. ಇವರಿಬ್ಬರು ಸೇವಾ ಪ್ರತಿನಿಧಿಯಾಗಿ ಕೆಲ ಸಮಯಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದರು.
ಎ.4ರಂದು ಸಂಜೆ ರಕ್ಷಿತಾ ಮತ್ತು ಲಾವಣ್ಯ ತಮ್ಮ ಮನೆಯಲ್ಲಿ ಹೊಟ್ಟೆ ನೋವೆಂದು ನರಳಾಡಿ ತೀವ್ರ ಅಸ್ವಸ್ಥಗೊಂಡಿದ್ದರು. ಇವರಿಬ್ಬರನ್ನು ಸ್ಥಳೀಯರ ಸಹಕಾರದಲ್ಲಿ ನೆಲ್ಯಾಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ರಕ್ಷಿತಾ ಅವರನ್ನು ಅವರ ಮನೆಯವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಲಾವಣ್ಯರನ್ನು ಅವರ ಮನೆಯವರು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಅವಲ್ಲಿಯ ವೈದ್ಯರ ಸಲಹೆಯಂತೆ ಸುರತ್ಕಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಕ್ಷಿತಾ ಅವರು ಎ.6 ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಲಾವಣ್ಯ ಇಂದು ಮಧ್ಯಾಹ್ನ ಸುರತ್ಕಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆನ್ನಲಾಗಿದೆ. ಇವರಿಬ್ಬರೂ ಪಟ್ಟೂರಿನಲ್ಲಿ ನೆರೆಕರೆ ಮನೆಯನ್ನು ಹೊಂದಿದ್ದಾರೆ. ಇವರ ಸಾವಿಗೆ ಕಾರಣ ಏನು ಕಾರಣ ಎಂದು ಸ್ವಷ್ಟಗೊಂಡಿಲ್ಲ. ಈ ಬಗ್ಗೆ ವೈದ್ಯಕೀಯ ವರದಿ ಬಂದ ನಂತರವಷ್ಟೇ ತಿಳಿದು ಬರಬೇಕಾಗಿದೆ. ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡರೇ, ಅಥವಾ ಇನ್ನೇನಾದರೂ ನಡೆದಿದೆಯೇ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಆಟೋ ಚಾಲಕನಿಗೆ ಅಪರಿಚಿತ ತಂಡದಿಂದ ಹಲ್ಲೆ: ಠಾಣೆಗೆ ದೂರು

Suddi Udaya

ಜಡಿ ಮಳೆ: ಸಂಪೂರ್ಣ ಕುಸಿದು ಬಿದ್ದ ಉಜಿರೆ ಹಳೆಪೇಟೆ ಎಸ್.ಎ. ರಝಾಕ್‌ರವರಿಗೆ ಸೇರಿದ ಮನೆ

Suddi Udaya

ಶಿಬಾಜೆಯಲ್ಲಿ ಎರಡು ವರ್ಷಗಳಿಂದ ಹಸಿ ಮೀನಿನ ವ್ಯಾಪಾರ ಮಾಡುತ್ತಿದ್ದ ನೋಣಯ್ಯ ಗೌಡ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೈಕ್ ಡಿಕ್ಕಿ ಗಾಯಾಳು ಕಡಿರುದ್ಯಾವರಅಂತರ ಲೋಕಯ್ಯ ಗೌಡ ಮೃತ್ಯು

Suddi Udaya

ದ್ವೇಷ ಭಾಷಣ ಪ್ರಕರಣ; ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿರೀಕ್ಷಣಾ ಜಾಮೀನು ಮಂಜೂರು

Suddi Udaya

ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಕೊಯ್ಯೂರು ಮಲೆಬೆಟ್ಟು ನಿವಾಸಿ ಅಮೃತೇಶ್‌ ರಿಗೆ ರೂ.19.90 ಲಕ್ಷ ವಂಚನೆ

Suddi Udaya
error: Content is protected !!