ಶಿಶಿಲ : ಅದೊಂದು ಅಪರೂಪದ ಕಾರ್ಯಕ್ರಮ. ಪ್ರತೀವರ್ಷ ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನೂಮ ಜಯಂತಿಯಂದು ಭಜನೆ, ಅನ್ನದಾನ, ರಾಮಾಯಣ ಗ್ರಂಥಪೂಜೆ, ರಾಮಾಯಣ ಕಥೆ ನಿರಂತರ ನಡೆದುಕೊಂಡು ಬರುತ್ತಿದೆ.
ಹನುಮ ಜಯಂತಿ ಈ ರೀತಿಯ ಕಾರ್ಯಕ್ರಮ ನಾನು ಪ್ರಥಮ ಬಾರಿ ನೋಡುತ್ತಿದ್ದೆನೆ. ಧಾರ್ಮಿಕ ಕಾರ್ಯ, ಧರ್ಮ ಜಾಗ್ರತಿ ಮೂಡಿಸುತ್ತಿರುವ ಈ ಮನೆಯ ಸೇವಾ ಕಾರ್ಯಕ್ಕೆ ಅಭಿನಂದನೆ. ಎಂದು ಬೆಂಗಳೂರು, ದಾವಣಗೆರೆ ವಿಪ್ರ ಸಾಮ್ರಾಜ್ಯದ ನಿರ್ದೆಶಕರಾದ ವೆ.ಮೂ ಶ್ರೀ ರಾಘವೇಂದ್ರ ಆಚಾರ್ಯ ನುಡಿದರು.
ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ ನಡೆದ ಹನೂಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನುಡಿದಿದ್ದರು,
ಇವರ ಧಾರ್ಮಿಕ ಸೇವಾ ಕಾರ್ಯ ಗುರುತಿಸಿದ ವಿಪ್ರ ಸಮೂಹ ಸಂಸ್ಥೆ ಬೆಂಗಳೂರಿನ ನಿರ್ದೆಶಕರಾದ ಶ್ರೀ ವೆ.ಬ್ರಹ್ಮ ರಾಘವೇಂದ್ರ ಆಚಾರ್ಯ ಮತ್ತು ಶ್ರೀ ರಾಘವೇಂದ್ರ ಮಾದಾಪುರ ಇವರು ಹನೂಮ ಜಯಂತಿ ಶುಭ ಸಂಧರ್ಭದಲ್ಲಿ ಶ್ರೀ ಬಿ.ಜಯರಾಮ ನೆಲ್ಲಿತ್ತಾಯರಿಗೆ ತಮ್ಮ ಸಂಸ್ಥೆ ವತಿಯಿಂದ ” ಭಜನಾ ಭಾಸ್ಕರ” ಎಂಬ ಪ್ರಶಸ್ತಿ ಪ್ರಸ್ತಾಪವನ್ನು ಮಂಡಿಸಿದರು.
ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಕಾಟುಕುಕ್ಕೆ, ಶ್ರೀ ಸುಂದರ ಬಿಳಿನೆಲೆ, ಶ್ರೀ ರಾಘವೇಂದ್ರ ಕಿಗ್ಗ, ಶ್ರೀ ಶ್ರೀನಿವಾಸ ಮೂಡೆತ್ತಾಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಇದೆ ಸಂಧರ್ಭದಲ್ಲಿ ಶ್ರೀ ಜಯರಾಮ ನೆಲ್ಲಿತ್ತಾಯ ದಂಪತಿಗಳನ್ನು ವಿಪ್ರ ಸಮೂಹ ಸಂಸ್ಥೆ ಬೆಂಗಳೂರು ವತಿಯಿಂದ ಅಭಿನಂದಿಸಲಾಗಿತ್ತು.