24.2 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೊಬೈಲ್ ಕಳವಾದರೆ ವಾಟ್ಸಪ್ ನಲ್ಲಿ ಹಾಯ್ ಕಳುಹಿಸಿದರೆ ಪತ್ತೆಗೆ ಪ್ರಯತ್ನ

ಬೆಳ್ತಂಗಡಿ: ನಿಮ್ಮ ಮೊಬೈಲ್ ಕಳವಾದರೆ ಮೊ. ಸಂಖ್ಯೆ 8277949183 ವಾಟ್ಸಪ್ ಸಂಖ್ಯೆಗೆ `ಹಾಯ್’ ಎಂದು ಸಂದೇಶ ಕಳುಹಿಸಿದರೆ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಕಳವಾದ ಮೊಬೈಲ್‌ಗಳ ಪತ್ತೆಗೆ ನೆರವಾಗಲು ಕೇಂದ್ರ ಸರ್ಕಾರ ಪ್ರತ್ಯೇಕ ಪೋರ್ಟಲ್‌ನ್ನು ಇತ್ತೀಚೆಗೆ ಆರಂಭಿಸಿದೆ. ಆದರೆ, ಅದರಲ್ಲಿ ವಿವರಗಳನ್ನು ತುಂಬಲು ಅನೇಕರಿಗೆ ಸಮಸ್ಯೆ ಆಗುತ್ತಿರುವುದರಿಂದ ಪ್ರಕ್ರಿಯೆಯನ್ನು ಸರಳಗೊಳಿಸಲು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಟ್ಸಫ್ ಮೂಲಕ ದೂರು ನೀಡಬಹುದಾದ ಸೇವೆಯನ್ನು ನೂತನವಾಗಿ ಜಾರಿಗೆ ತರಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಮೊಬೈಲ್ ಕಳವಾಗಿದ್ದರೆ 8277949183 ವಾಟ್ಸಪ್ ಸಂಖ್ಯೆಗೆ ಹಾಯ್ ಎಂದು ಸಂದೇಶ ಕಳುಹಿಸಬೇಕು. ಅವರಿಗೆ ಅರ್ಜಿಯ ಕೊಂಡಿಯನ್ನು ವಾಟ್ಸಪ್‌ನಲ್ಲಿ ಕಳುಹಿಸಲಾಗುವುದು. ಅದರಲ್ಲಿ ಅವರು ಕಳವಾದ ಮೊಬೈಲಿನ ಐಎಂಇಐ ಸಂಖ್ಯೆ ಸೇರಿ ಕೆಲವು ವಿವರಗಳನ್ನು ಭರ್ತಿಮಾಡಿದರೆ ಸಾಕು. ಆ ಮಾಹಿತಿಯನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಸಿಇಐಆ ಪೋರ್ಟಲ್‌ನಲ್ಲಿ ತುಂಬಿಸಿ, ಮೊಬೈಲ್ ಪತ್ತೆ ಕಾರ್ಯದಲ್ಲಿ ನೆರವಾಗಲಿದ್ದಾರೆ ಎಂದು ಹೇಳಿದರು.
ಈಗಾಗಲೇ 200ಕ್ಕೂ ಅಧಿಕ ಮೊಬೈಲ್ ಪತ್ತೆ: ಮೊಬೈಲ್ ಕಳವಿಗೆ ಸಂಬಂಧಿಸಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿಇಐಆರ್ ಪೋರ್ಟಲ್‌ನಲ್ಲಿ ಇದುವರೆಗೆ 757 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 2006 ಹೆಚ್ಚು ಮೊಬೈಲ್ಗಳನ್ನು ಪತ್ತೆಹಚ್ಚಿದ್ದೇವೆ. 120 ಮೊಬೈಲ್‌ಗಳನ್ನು ಮಾಲೀಕರಿಗೆ ಮರಳಿಸಲಾಗಿದೆ ಎಂದರು.
ಇಲಾಖೆ ಸೇವೆ ಗುಣಮಟ್ಟ ಪ್ರತಿಕ್ರಿಯೆಗೆ ಕ್ಯೂಆರ್ ಕೋಡ್: ಪೊಲೀಸ್ ಇಲಾಖೆ ಸೇವೆಯ ಗುಣಮಟ್ಟದ ಕುರಿತು ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರತಿಕ್ರಿಯೆ ಹಂಚಿಕೊಳ್ಳುವ ವಿನೂತನ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ಸೇವೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಚಾಲನೆ ನೀಡಿದ್ದಾರೆ.
ಈ ನೂತನ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಪ್ರತಿ ಠಾಣೆಗಳಲ್ಲೂ ಕ್ಯೂಆರ್ ಕೋಡ್‌ನ್ನು ಇರಿಸಲಾಗುತ್ತದೆ. ಸಾರ್ವಜನಿಕರು ಅದನ್ನು ಸ್ಕ್ಯಾನ್ ಮಾಡಿ, ಅದರಲ್ಲಿ ಆಯಾ ಠಾಣೆಯನ್ನು ಆಯ್ಕೆ ಮಾಡಿ, ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ತುಂಬುವ ಮೂಲಕ ಪ್ರತಿಕ್ರಿಯೆಯನ್ನು ನೀಡಬಹುದು ಎಂದು ವಿವರಿಸಿದರು. ಅಭಿಪ್ರಾಯ ಹಂಚಿಕೊಳ್ಳುವುದರೊಂದಿಗೆ ಅಹವಾಲುಗಳನ್ನೂ ಸಾರ್ವಜನಿಕರು ಸಲ್ಲಿಸಬಹುದು. ಠಾಣೆಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ಆ ಬಗ್ಗೆಯೂ ದೂರನ್ನೂ ನೀಡಬಹುದು ಎಂದ ಕುಲದೀಪ್ ಜೈನ್, ಕಳೆದ ಮೂರು ದಿನಗಳಿಂದ ಪ್ರಾಯೋಗಿಕವಾಗಿ ಈ ಸೇವೆಯನ್ನು ಆಯ್ದ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತರಲಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದರು.

Related posts

ಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

Suddi Udaya

ತನ್ನ ತಾಯಿಯನ್ನು ಎತ್ತಿಕೊಂಡು ಬಂದು ಮತಚಲಾಯಿಸಿದ ಮಗ: ಅನಾರೋಗ್ಯದ ನಡುವೆಯೂ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ ರೋಹಿಣಿ

Suddi Udaya

ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಆಶ್ರಯದಲ್ಲಿ, ನಡೆಯುವ ಯೋಗಾಸನ, ಪ್ರಾಣಾಯಾಮ ಧ್ಯಾನ ಶಿಬಿರದ ಪೂರ್ವಭಾವಿ ಸಭೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ಭಾವೈಕ್ಯತೆಯ ಸಂಗಮ ಕಾರ್ಯಕ್ರಮ

Suddi Udaya

ವೇಣೂರು: ಪಡ್ಡಂದಡ್ಕ ಕಟ್ಟೆ ನಿವಾಸಿ ಪ್ರಗತಿಪರ ಕೃಷಿಕ ಕೆ ಮಹಮ್ಮದ್ ನಿಧನ

Suddi Udaya

ಉಜಿರೆ : ರತ್ನಮಾನಸ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ 8 ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Suddi Udaya
error: Content is protected !!