24.1 C
ಪುತ್ತೂರು, ಬೆಳ್ತಂಗಡಿ
September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ನಾರಾವಿ ಅರಸು ಕಟ್ಟೆಯಲ್ಲಿ ಗೂಡ್ಸ್ ಟೆಂಪೋ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಜೋಕಿ ರೋಡ್ರಿಗಸ್‌ ಸ್ಥಳದಲ್ಲೇ ಸಾವು

ನಾರಾವಿ: ಇಲ್ಲಿನ ನಾರಾವಿ ಗ್ರಾಮದ ಅರಸುಕಟ್ಟೆ ಹೆಗ್ಡೆ ಪರ್ನಿಚರ್ ಅಂಗಡಿ ಬಳಿ ಬೈಕ್ ಗೂಡ್ಸ್ ಟೆಂಪೋ ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಎ. 27 ರಂದು ಸಂಭವಿಸಿದೆ. ಬೈಕ್ ಸವಾರ ಜೋಕಿ ರೋಡ್ರಿಗಸ್‌ ಸ್ಥಳದಲ್ಲೇ ಮೃತಪಟ್ಟವರು.

ಎ. 27 ರಂದು ಸುಮಾರು ಮಧ್ಯಾಹ್ನ 1 ಗಂಟೆಗೆ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ಅರಸುಕಟ್ಟೆ ಹೆಗ್ಡೆ ಪರ್ನಿಚರ್ ಅಂಗಡಿ ಬಳಿ ನಾರಾವಿ- ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ಬೈಕ್‌ ನಂಬ್ರ ಕೆ ಎ 21 ವಿ 6818 ಅದರ ಸವಾರ ಜೋಕಿ ರೋಡ್ರಿಗಸ್‌ ಎಂಬವರು ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ಬರುತ್ತಿದ್ದು, ಒಮ್ಮೆಲೇ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿ ನಾರಾವಿ ಕಡೆಯಿಂದ ಬರುತ್ತಿದ್ದ ಖಾಲಿದ್‌ ಕೋರ್ಟ್‌ ರಸ್ತೆ ಸಂಜಯ ನಗರ ಬೆಳ್ತಂಗಡಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ407 ಟೆಂಪೋ ಗೂಡ್ಸ್‌ ನಂಬ್ರ (ಕೆಎ 19 ಎ 8872 ) ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಬೈಕ್‌ ನೊಂದಿಗೆ ರಸ್ತೆಗೆ ಎಸೆಯಲ್ಪಟ್ಟುತಲೆಗೆ, ಬಲ ಕಾಲಿಗೆ, ಎಡ ಕೈಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎನ್ನಲಾಗಿದೆ. ಈ ಬಗ್ಗೆ ವೇಣೂರು ಪೊಲೀಸರು ಠಾಣಾ 24/2023 ಕಲಂ: 279,304(A) IPCಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಬೆಳ್ತಂಗಡಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾದ ಕಾರ್ಯಗಾರದ ಜೊತೆಯಲ್ಲಿ ಆಟಿಡೊಂಜಿ ದಿನ ಹಾಗೂ ಪೋಷನ್ ಪಕ್ವಾಡ್ ಕಾರ್ಯಕ್ರಮ,

Suddi Udaya

ಹಲ್ಲೆಗೆ ಯತ್ನ: ಸೌಜನ್ಯ ತಾಯಿ ಕುಸುಮಾವತಿರವರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಕೊಕ್ಕಡ ಜೇಸಿಗೆ ಸಮ್ಮೇಳನ ಪ್ರಶಸ್ತಿ: ಅಕ್ಷರ ದೀವಿಗೆ ವಲಯದ ಅತ್ಯುತ್ತಮ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಎಸ್‌ಡಿಎಂ ಶಾಲೆಯಲ್ಲಿ ಸಮ್ಮರ್ ಸ್ಪಾರ್ಕ್ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಪರಿಹಾರ

Suddi Udaya

ಚಾರ್ಮಾಡಿ ಬೂತ್ ಸಂಖ್ಯೆ 21ರಲ್ಲಿ ಕೈ ಕೊಟ್ಟ ಮತ ಯಂತ್ರ

Suddi Udaya
error: Content is protected !!