March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಅರಸಿನಮಕ್ಕಿ: ಕೃಷಿಕ ಮುರಳೀಧರ ಗೌಡ ನೇಣು ಬಿಗಿದು ಆತ್ಮಹತ್ಯೆ

ಅರಸಿನಮಕ್ಕಿ : ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಸಮೀಪದ ಪಾಲೆಂಜ ನಿವಾಸಿ ಕೃಷಿಕ ಮುರಳೀಧರ ಗೌಡ ಪಾಲೆಂಜ ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.4ರಂದು ನಡೆದಿದೆ.

ಕಂಟ್ರಾಕ್ಟ್ರುದಾರರಾಗಿದ್ದ ಇವರು ಜನಾನುರಾಗಿಯಾಗಿದ್ದರು. ಹಲವಾರು ಸಂಘ -ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಯೋಜನಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿಯಾಗಿ ದೇವಳದ ಅಭಿವೃದ್ಧಿಗೇ ವಿಶೇಷವಾಗಿ ಶ್ರಮಿಸಿದ್ದರು.ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಪತ್ನಿ, ಮಗು, ತಾಯಿ ಹಾಗೂ ಇಬ್ಬರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.

Related posts

ಬಳಂಜ ಶಾಲಾ ಮಕ್ಕಳನ್ನು ಕರೆದೊಯ್ದ ಪಿಕಪ್ & ಟಿಪ್ಪರ್ ಚಾಲಕರ ವಿರುದ್ಧ ಪ್ರಕರಣ ದಾಖಲು

Suddi Udaya

ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸಿಎಂ ಸಿದ್ದರಾಮಯ್ಯರಿಗೆ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರವರಿಗೆ ಮನವಿ

Suddi Udaya

ರಾಜಕೇಸರಿ ಸಂಘಟನೆ ವತಿಯಿಂದ ಕರ್ನೋಡಿ ಸ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಣೆ

Suddi Udaya

ವಾಣಿ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಸಮಾವೇಶ

Suddi Udaya

ಬೆಳ್ತಂಗಡಿ ಬಿಜೆಪಿ ಪಕ್ಷದ ಕಚೇರಿಗೆ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ

Suddi Udaya

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya
error: Content is protected !!