September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಜಿಲ್ಲಾ ಸುದ್ದಿತಾಲೂಕು ಸುದ್ದಿ

ಬಿಜೆಪಿ ತನ್ನ ಗುರಿಯನ್ನು ಮೀರಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಲಿದೆ: ಹರೀಶ್ ಪೂಂಜ

ಬೆಳ್ತಂಗಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ನಿಮ್ಮ ಒಂದು ಮತ ಬೆಳ್ತಂಗಡಿಯ ಅಭಿವೃದ್ಧಿಗಾಗಿ ಅದಕ್ಕಾಗಿ ಎಲ್ಲರೂ ತಪ್ಪದೆ ಮತ ಚಲಾಯಿಸಿ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹೇಳಿದರು.


ಅವರು ಗರ್ಡಾಡಿಯ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ, ತಾಲೂಕಿನಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ಬಾರಿ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದ್ದಾರೆ. ತಾಲೂಕಿನ 241 ಬೂತು 81 ಗ್ರಾಮಗಳಲ್ಲಿ ಮತದಾರರು ಹುಮ್ಮಸ್ಸಿನಿಂದ ಭಾಗವಹಿಸುತ್ತಿದ್ದಾರೆ. ಬಿಜೆಪಿ ತನ್ನ ಗುರಿಯನ್ನು ಮೀರಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಲಿದೆ. ಕಾರ್ಯಕರ್ತರ ಪರಿಶ್ರಮ ಮತ್ತು ತಾಲೂಕಿನ ದೈವ ದೇವರ ಆಶೀರ್ವಾದ ಇದಕ್ಕೆ ಇದೆ ಎಂದು ಅಭಿಪ್ರಾಯ ಪಟ್ಟರು.

Related posts

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಎರಡು ದಿನಗಳ ‘ಪ್ರತಿಭಾ ಪ್ರದರ್ಶನಕ್ಕೆ ಚಾಲನೆ

Suddi Udaya

ಅಳದಂಗಡಿ ಸಂಪರ್ಕ ರಸ್ತೆಯಲ್ಲಿ ಮತ್ತೆ ಉರುಳಿ ಬಿದ್ದ ಮರ: ಪರದಾಡಿದ ಶಾಲಾ ಮಕ್ಕಳು

Suddi Udaya

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ: ಧ್ವಜಾರೋಹಣ, ಹಸಿರು ಹೊರೆಕಾಣಿಕೆ ಸಮರ್ಪಣೆ

Suddi Udaya

ಬೆಳ್ತಂಗಡಿ: ಪೋಲಿಸರ ಸೂಚನೆ ನಿರ್ಲಕ್ಷಿಸಿ ಅಕ್ರಮಕೂಟ ಸೇರಿದ ಹಿನ್ನೆಲೆ ಅನಿಲ್ ಕುಮಾರ್ ಅಂತರ, ಪ್ರಸನ್ನರವಿ, ಕುಸುಮಾವತಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲು

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಗಳೂರಿನ ಖ್ಯಾತ ಎಸ್.ವ್ಯಾಸ ಸಂಸ್ಥಾನದ ಉಪಕುಲಪತಿ ಭೇಟಿ

Suddi Udaya

ನಿಡ್ಲೆ ಬೂತ್ ಗೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಭೇಟಿ

Suddi Udaya
error: Content is protected !!