September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ ಟೀಂ ಅಭಯಹಸ್ತ ಆಯೋಜನಾ ಸಮಿತಿಯಿಂದ ಸುಲ್ಕೇರಿಮೊಗ್ರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣೆ

ಬೆಳ್ತಂಗಡಿ: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯವಾಕ್ಯದೊಂದಿಗೆ, ಸೇವೆಗಾಗಿ ಕ್ರೀಡೆ ಎಂಬ ಪರಿಕಲ್ಪನೆಯಡಿ ಕಳೆದ ಆರು ವರ್ಷಗಳಿಂದ ಸಮಾಜಮುಖಿ ಕಾರ್ಯ ನಡೆಸುತ್ತಿರುವ ಟೀಂ ಅಭಯಹಸ್ತ ಆಯೋಜನಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಸುಲ್ಕೇರಿಮೊಗ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಜೂ.7 ರಂದು ಜರುಗಿತು.


ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಸಂಘಟನೆಯ ಸ್ಥಾಪಕ ಸಂದೀಪ್ ಎಸ್ ನೀರಲ್ಕೆ ಅರ್ವರವರು “ಸಂಘಟನೆ ಅನೇಕ ವರ್ಷಗಳಿಂದ ಅಶಕ್ತರ, ಅನಾರೋಗ್ಯ ಪೀಡಿತರ, ಸ್ವ ಉದ್ಯೋಗ ಆಸಕ್ತ ಬಡವರ, ವಿದ್ಯಾರ್ಥಿಗಳ ಧ್ವನಿಯಾಗಿ ಸೇವಾ ಕಾರ್ಯ ನಡೆಸುತ್ತಿದೆ. ಗುರುಹಿರಿಯರ, ಊರವರ ಪ್ರೋತ್ಸಾಹ, ಸಹಕಾರ, ಮಾರ್ಗದರ್ಶನದಿಂದ ಸಂಘಟನೆ ಉತ್ತಮ ರೀತಿಯಲ್ಲಿ ಸಾಗಿಬರುತ್ತಿದೆ” ಎಂದರು
ಕಾರ್ಯಕ್ರಮದಲ್ಲಿ ಸಂಘಟನೆಯ ಸಲಹೆಗಾರ ರವೀಂದ್ರ ಬಿ ಅಮೀನ್, ಎಸ್ ಡಿ ಎಂ ಸಿ ಅಧ್ಯಕ್ಷೆ, ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ಭಟ್, ಶಿಕ್ಷಕರಾದ ನಾಗಭೂಷಣ್, ಶ್ರೀಮತಿ ಶಾಂತಿ, ಸಹಶಿಕ್ಷಕರು, ಸಂಘಟನೆಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಮಂಗಳೂರು ಸಿಸಿಆರ್ ಬಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಭೋಜಾರ ಪುರಂದರ ಗೌಡರವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ

Suddi Udaya

ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಮಹಾಸಭೆ, ಸಮಿತಿ ರಚನೆ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ನೈತಿಕ ಪೊಲೀಸ್ ಗಿರಿ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್‌ವೈಎಸ್ ಬೆಳ್ತಂಗಡಿ ಝೋನ್ ನಿಂದ ವೃತ ನಿರೀಕ್ಷಕರಿಗೆ ಮನವಿ

Suddi Udaya

ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ನೇಮಕ

Suddi Udaya

ಕಾಡ್ಗಿಚ್ಚಿನ ಮುಂಜಾಗ್ರತೆಗಾಗಿ ಗಡಾಯಿಕಲ್ಲು ಚಾರಣ ಪ್ರವೇಶ ತಾತ್ಕಲಿಕ ನಿಷೇಧ

Suddi Udaya

140 ವರ್ಷಗಳ ಇತಿಹಾಸವಿರುವ ಗೇರುಕಟ್ಟೆ ಕೊರಂಜ ಪ್ರಾಥಮಿಕ ಶಾಲಾ ನೂತನ ಕೊಠಡಿ ಉದ್ಘಾಟನೆ

Suddi Udaya
error: Content is protected !!