September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ‘ಓಶಿಯನ್ ಎಂಪೈರ್ ಮಲ್ಟಿಕ್ಯೂಸಿನ್ ರೆಸ್ಟೊರೆಂಟ್’ ಉದ್ಘಾಟನೆ

ಬೆಳ್ತಂಗಡಿ; ಹೊಟೇಲ್ ಉದ್ಯಮದಲ್ಲಿ ಸುದೀರ್ಘ 45 ವರ್ಷಗಳಿಗೂ ಮಿಕ್ಕಿದ ಅನುಭವ ಹೊಂದಿರುವ ವೈ. ಕೆ ಗ್ರೂಪ್ಸ್ ಕನ್ನಡಿಕಟ್ಟೆ ಇವರ ಸಾರಥ್ಯದಲ್ಲಿ ಬೆಳ್ತಂಗಡಿ ಸಂತೆಕಟ್ಟೆಯ ಐ.ಜೆ ಕಾಂಪ್ಲೆಕ್ಸ್ ನಲ್ಲಿ ‘ಓಶಿಯನ್ ಎಂಪೈರ್
ಮಲ್ಟಿಕ್ಯೂಸಿನ್ ರೆಸ್ಟೋರೆಂಟ್’ ಏ.20 ರಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ಮಾಜಿ ಸಚಿವ ಕೆ‌ ಗಂಗಾಧರ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಖಿಲರ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಡಿ.ಡಿ ಗ್ರೂಪ್ಸ್ ಮಾಲಕ ಅಬ್ದುಲ್ ರಝಾಕ್ ಡಿ.ಡಿ, ಅಯ್ಯಪ್ಪ ದೇವಸ್ಥಾನದ ಗುರು ಸ್ವಾಮಿ ಪ್ರಕಾಶ್ ಕೆ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮುಹಮ್ಮದ್ ರಫಿ, ನ್ಯಾಷನಲ್ ಇನ್ಶ್ಯುರೆನ್ಸ್ ಅಭಿವೃದ್ಧಿ ಅಧಿಕಾರಿ ಜೋನ್ ಅರ್ವಿನ್ ಡಿಸೋಜಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ‌ ಬಿ, ಎಸ್.ಎಮ್.ಎಸ್ ಗ್ರೂಪ್ಸ್ ನ ಮಾಲಕ ಹಾಜಿ‌ ಅಬ್ದುಲ್ ಲೆತೀಫ್, ರೈಡಿಂಗ್ ಜೋಡಿ ಸೋಷಿಯಲ್ ಮೀಡಿಯಾ ಬಳಗದ ಶ್ಯಾಂ ಪ್ರಸಾದ್ ಕಾಮತ್ ಮೊದಲಾದವರು ಶುಭ ಹಾರೈಸಿದರು.\

ಸಮಾರಂಭದಲ್ಲಿ ಮಾತೃಶ್ರೀ ಸಿಲ್ಕ್ಸ್ ನ ಪಾಲುದಾರ ಮೋಹನ್ ಸುವರ್ಣ, ಕೆಎಂಜೆ ರಾಜ್ಯ ಸಮಿತಿ ಸದಸ್ಯ ಅಬ್ಬೋನು ಮದ್ದಡ್ಕ, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಮೆಹಬೂಬ್ ಬೆಳ್ತಂಗಡಿ, ಉದ್ಯಮಿ ಪ್ರಶಾಂತ್ ಕೊಕ್ಕರ್ಣೆ, ಗುರುವಾಯನಕೆರೆಯ ಉದ್ಯಮಿ ಉಮರ್ ಜಿ.ಕೆ, ವಾಣಿ ಆಂಗ್ಲ‌ ಮಾಧ್ಯಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ, ಕನ್ನಡಿಕಟ್ಟೆ ಜುಮ್ಮಾ ಮಸ್ಜಿದ್ ಗೌರವಾಧ್ಯಕ್ಷ ಅಬ್ಬಾಸ್ ಪಜೆಮಾರ್, ಸಂತೆಕಟ್ಟೆ ಅಟೋ ಚಾಲಕರ ಮಾಲಕರ‌ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್, ಔರಾ ಎಟ್‌ಲೈಯರ್ ಪ್ರೈವೆಟ್ ಲಿಮಿಟೆಡ್ ಮಾಲಕ ಅಕ್ರಂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ವ್ಯವಸ್ಥಾಪಕ ಪರಮೇಶ್ವರ, ಚಾಮುಂಡೇಶ್ವರಿ ಹಾರ್ಡ್ ವೇರ್ ಮಾಲಕ ಸುಧೀರ್ ಹೊಳ್ಳ, ಹವ್ಯಾಸಿ ಪತ್ರಕರ್ತ ಹೆಚ್ ಮುಹಮ್ಮದ್ ವೇಣೂರು ಮೊದಲಾದವರು ಭಾಗಿಯಾಗಿದ್ದರು.

ಈ‌ ಸಂದರ್ಭದಲ್ಲಿ ಬೆಳ್ತಂಗಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗುರುಸ್ವಾಮಿ ಪ್ರಕಾಶ್ ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಿರಿಯ ಪತ್ರಕರ್ತರ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದರು. ವೈ.ಕೆ ಗ್ರೂಪ್ಸ್ ಮಾಲಕ ಯಾಕೂಬ್ ಕನ್ನಡಿಕಟ್ಟೆ, ಮಕ್ಕಳಾದ ಯಾಸರ್ ಮತ್ತು ಯಾಸೀರ್ ಅವರು ಆಹ್ವಾನಿತ ಬಂಧುಗಳನ್ನು‌ ಬರಮಾಡಿಕೊಂಡು ಗೌರವಿಸಿದರು.

ದಾರುಸ್ಸಲಾಂ ಚೇರ್ಮೆನ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸಯ್ಯಿದ್ ಮಾಡ ತಂಙಳ್ ಉದ್ಯಾವರ ಹಾಗೂ ವಿವಿಧ ಜಮಾಅತ್ ಗಳ ಖತೀಬರುಗಳು ಆಗಮಿಸಿ‌ ಧಾರ್ಮಿಕ ವಿಧಿ‌ ಹಾಗೂ‌ ದುಆ ನೆರವೇರಿಸಿದರು. ದಾರುಸ್ಸಲಾಂ ಧಾರ್ಮಿಕ ವಿದ್ಯಾರ್ಥಿಗಳ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆಯಿತು.

ಫುಡ್ ಸ್ಪೆಷಲ್ ಏನೇನು?: ಅರೇಬಿಯನ್ ಮಾದರಿಯ ಕುಝಿ ಮಂದಿ, ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ “ಮಜ್ಲಿಸ್” ಹಾಗೂ ಅರೇಬಿಯನ್ ಮದ್‌ಹೂತ್ ಇವುಗಳು ಓಶಿಯನ್ ಎಂಪೈರ್ ವಿಶೇಷತೆ. ಅದಲ್ಲದೆ ಅನುಭವಿ ಪಾಕತಜ್ಞರಿಂದ ವೆಜ್ ಮತ್ತು ನಾನ್ ವೆಜ್, ಅರೇಬಿಯನ್ ಫುಡ್, ಬಿರಿಯಾಣಿ ಸ್ಪೆಷಲ್, ಚೈನೀಸ್, ಸೌತ್‌ ಇಂಡಿಯನ್, ನಾರ್ತ್ ಇಂಡಿಯನ್ ಸ್ಪೆಷಲ್, ಚಿಕನ್ ಟಿಕ್ಕ, ಶವರ್ಮ, ಗ್ರಿಲ್, ಆಲ್ಫಾಮ್, ನೂಡಲ್ಸ್, ಪ್ರೈಡ್ ರೈಸ್ ಬಗೆಗಳು, ಮೀನಿನ ಬಗೆಬಗೆಯ ಲೈವ್ ಖಾದ್ಯಗಳು, ಫ್ರೆಶ್ ಜ್ಯೂಸ್ ಮತ್ತು ರೆಡಿ ಜ್ಯೂಸ್‌ ಕೌಂಟರ್, ಐಸ್ ಕ್ರೀಂ ಕಾರ್ನರ್ ಮೊದಲಾದ ಸೌಲಭ್ಯ ಒದಗಿಸಲಾಗಿದೆ.

ಇತರ ವಿಶೇಷತೆಗಳು;
ಮನಮೋಹಕ ಒಳಾಂಗಣ ವಿನ್ಯಾಸ, ಆಕರ್ಷಕ ವರ್ಣಾಲಂಕಾರ ಮತ್ತು ಮನಸ್ಸಿಗೆ ಮುದ‌ನೀಡುವ ಬೆಳಕಿನ ಸಂಯೋಜನೆಯೊಂದಿಗೆ ಏಕಕಾಲಕ್ಕೆ 80 ಮಂದಿಯ ಆಸನದ ವಿಶಾಲ ಡೈನಿಗ್ ಹಾಲ್, ಪ್ರತ್ಯೇಕ ಫ್ಯಾಮಿಲಿ ರೂಮ್ಸ್, ಎ.ಸಿ ಸೌಲಭ್ಯ, ಪಾರ್ಸೆಲ್ ಕೌಂಟರ್, 2 ಕಿ.ಮೀ ವ್ಯಾಪ್ತಿಗೆ ಫ್ರೀ ಡೆಲಿವರಿ ಸರ್ವಿಸ್, ದೂರ ಪ್ರದೇಶಕ್ಕೆ ಪೈಡ್ ಸರ್ವಿಸ್, ಮಿನಿ ಪಾರ್ಟಿಗಳ ಆಯೋಜನೆಗೆ ಅವಕಾಶ, ಕ್ಯಾಟರಿಂಗ್ ಸರ್ವಿಸ್, ಫ್ರೆಂಡ್ಸ್ ಪಾರ್ಟಿ, ಬರ್ತ್ ಡೇ ಪಾರ್ಟಿ, ಡೀಲರ್ಸ್ ಮೀಟ್ ಗೆ ಅವಕಾಶ, ವಿಶಾಲ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ವಿಶಾಲ ಕಿಚನ್, ಸೈಫ್ ಕಾರ್ಡ್, ಆನ್ಲೈನ್ ಪೇಮೆಂಟ್ ಸಿಸ್ಟಂ, ಹೈಜೀನಿಕ್ ವಾಶ್ ರೂಂ ಫೆಸಿಲಿಟಿ, ಫೀಡಿಂಗ್ ರೂಂ, ನಮಾಝ್ ಕೊಠಡಿ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮೊದಲಾದ‌ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

Related posts

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ನೂತನ ನಾಯಕರ ಪದಗ್ರಹಣ ಮತ್ತು ಪ್ರಮಾಣವಚನ

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಸರ್ಕಲ್ ಸಮಿತಿ ವತಿಯಿಂದ ವಿಚಾರ ವಿನಿಮಯ

Suddi Udaya

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರಿ ಭಾರತಿ ಬಿಜೆಪಿ – 7 ಸ್ಥಾನ, ಕಾಂಗ್ರೆಸ್ – 5 ಸ್ಥಾನ

Suddi Udaya

ರುಡ್‌ಸೆಟ್ ಸಂಸ್ಥೆಯಲ್ಲಿ ಎಸಿ ಮತ್ತು ಫ್ರಿಡ್ಜ್ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

Suddi Udaya
error: Content is protected !!