September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಡಿ.ಎಚ್.ಒ ಭೇಟಿ

ಬೆಳ್ತಂಗಡಿ: ಸರಕಾರಿ ಆಸ್ಪತ್ರೆ ಹಾಗೂ ಡಯಾಲಿಸಿಸ್ ಘಟಕದಲ್ಲಿ ರೋಗಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರ ರವರು ಸಾರ್ವಜನಿಕರ ಆಗ್ರಹದ ಮೇರೆಗೆ ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ತರಾಟೆ ತೆಗೆದುಕೊಂಡ ಹಿನ್ನಲೆಯಲ್ಲಿ ಇಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಜಿ ಶಾಸಕರ ಜೊತೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ರು ತನ್ನ ಕೋರಿಕೆಯ ಹಿನ್ನಲೆಯಲ್ಲಿ ಶೇ.95 ರಷ್ಟು ಸಮಸ್ಯೆಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಬೆಳ್ತಂಗಡಿಯ ವೈದ್ಯಾಧಿಕಾರಿಗಳು ಸರಿಪಡಿಸಿದ್ದು ಅವರಿಗೆ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಹೆಚ್ಚುವರಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಬೆಳ್ತಂಗಡಿಗೆ ನೀಡುವಲ್ಲಿ ಪ್ರಯತ್ನಿಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಸಂದರ್ಭ ತಿಳಿಸಿದರು.

ಜೂ. 17 ರಂದು ಅಪರಾಹ್ನ ಪುನಃ ಜಿಲ್ಲಾ ಆರೋಗ್ಯಾಧಿಕಾರಿಗಳು ಭೇಟಿ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ, ನ್ಯಾಯಾವಾದಿ ಮನೋಹರ್ ಕುಮಾರ್ ಇಳಂತಿಲ, ಕಾರ್ಮಿಕ ಮುಖಂಡ ಹಾಗೂ ನ್ಯಾಯವಾದಿ ಬಿ ಎಂ ಭಟ್, ದಿನೇಶ್ ಕೋಟ್ಯಾನ್, ಡಾ| ಚಂದ್ರಕಾಂತ್ ಉಪಸ್ಥಿತರಿದ್ದರು.

Related posts

ಡಾ. ರವಿ ಕಕ್ಕೆಪದವು ಅವರಿಗೆ ಸೀನಿಯರ್ ಚೇಂಬರ್ ನಿಕಟ ಪೂರ್ವ ರಾಷ್ಟ್ರ ಅಧ್ಯಕ್ಷರ ಎಕ್ಸಲೆನ್ಸ್ ಅವಾರ್ಡ್

Suddi Udaya

ನಿವೃತ್ತ ಮುಖ್ಯೋಪಾಧ್ಯಾಯಿನಿ ಉಮಾ ಡಿ. ಗೌಡ ಹಟ್ಟತ್ತೋಡಿರವರಿಗೆ ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya

ಉಜಿರೆ: ವ್ಯಾಪಾರ ಪರವಾನಿಗೆ ನವೀಕರಣ ಗೊಂದಲ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ಮನವಿ

Suddi Udaya

ಜೆಡಿಎಸ್ ಪಕ್ಷದ ಪ್ರಭಾವಿ ನಾಯಕ ಹೆಚ್.ಡಿ ರೇವಣ್ಣ ಅಳದಂಗಡಿ ಸತ್ಯದೇವತಾ ಕ್ಷೇತ್ರಕ್ಕೆ ಭೇಟಿ

Suddi Udaya

ಕುವೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆ ನೀರು

Suddi Udaya

ವಿಶ್ರಾಂತ ಶಿಕ್ಷಕ ಮುಂಡಾಜೆ ಶಂಕರ್ ತಾಮನ್ಕರ್ ಅವರಿಂದ ಮಾದರಿ ಕಾರ್ಯಕ್ರಮ

Suddi Udaya
error: Content is protected !!