23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕುತ್ಲೂರು ಸ.ಉ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ

ಕುತ್ಲೂರು: ಸರಕಾರಿ ಉನ್ನತೀಕರಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭವು ನಡೆಯಿತು.

ಮುರಳಿ ಬಿ ನೋಟರಿ ವಕೀಲರು ಬೆಳ್ತಂಗಡಿ ಇವರು ಬರೆಯುವ ಪುಸ್ತಕ ವಿತರಣೆ ಮಾಡಿ ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿರುತ್ತಾರೆ. ನಮ್ಮ ಈ ಶಾಲೆಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ದೇಶದ ಉತ್ತಮ ಪ್ರಜೆಗಳಾಗಬೇಕೆಂದು ಶುಭ ಹಾರೈಸಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಭಟ್ ಕುಕ್ಕುಜೆ ಇವರು ಪುಸ್ತಕ ವಿತರಣೆ ಮಾಡಿದ ವಕೀಲರನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಕೂತ್ಲೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸತೀಶ್ ಪಡಿವಾಳ್, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಜ್ಯೋತಿ ಶಿವಣ್ಣ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಮತ್ತು ಪ್ರೇಮ, ವಕೀಲರ ಧರ್ಮಪತ್ನಿ ಮನೋರಮ ಭಟ್, ಮಕ್ಕಳಾದ ಮಯೂರ ಮತ್ತು ಮಂದಾರ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಸುಮನಾಜಿ ಸ್ವಾಗತಿಸಿದರು. ಶಿಲ್ಪಾರವರು ಧನ್ಯವಾದವಿತ್ತರು.ಶಾಲಾ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಮೇ 4: ವಿದ್ಯುತ್ ನಿಲುಗಡೆ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚಾರಣೆ

Suddi Udaya

ಎಸ್‌ಕೆಎಸ್‌ಎಸ್‌ಎಫ್ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಯಾಸಿರ್ ಕಕ್ಕಿಂಜೆ ಆಯ್ಕೆ

Suddi Udaya

ಪ್ರಸನ್ನ ಪದವಿ ಪೂರ್ವ, ಎ. ಎ ಅಕಾಡೆಮಿ ಕಾಲೇಜಿನಲ್ಲಿ “ಕುಕ್ಕಿಂಗ್ ವಿದೌಟ್ ಪೈಯರ್” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾಗಿ ಇಸುಬು ಯು.ಕೆ ನೇಮಕ

Suddi Udaya

ಧರ್ಮಸ್ಥಳ: ನೇತ್ರಾವತಿ ಸೇತುವೆಯ ಕೆಳಗೆ ಅಪರಿಚಿತ ಶವ ಪತ್ತೆ

Suddi Udaya
error: Content is protected !!