ಬೆಳ್ತಂಗಡಿ: ಸರಕಾರಿ ಸರಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಡಯಾಲಿಸಿಸ್ ಘಟಕದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ಮಾಜಿ ಶಾಸಕ ವಸಂತ ಬಂಗೇರ ಭೇಟಿ ನೀಡಿ, ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ 15 ದಿನಗಳಲ್ಲಿ ಆಸ್ಪತ್ರೆಯ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದ ಜಿಲ್ಲಾ ಆರೋಗ್ಯಾಧಿಕಾರಿಗಳು ಜೂ.17 ರಂದು ಮಾಜಿ ಶಾಸಕ ವಸಂತ ಬಂಗೇರ ಜೊತೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು ಇದಕ್ಕೆ ತಕ್ಷಣ ಪರಿಹಾರ ಮಾಡುವಂತೆ ವಸಂತ ಬಂಗೇರ ಡಿ.ಎಚ್.ಓ ಅವರಿಗೆ ತಿಳಿಸಿದರು.
ಮಾಧ್ಯಮದವರ ಜೊತೆ ಮಾತಾಡಿದ ಡಿ.ಎಚ್.ಒ ಡಾ. ಕಿಶೋರ್ ಕುಮಾರ್, ಈಗ ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಪರಿಶೀಲನೆ ಮಾಡಲಾಗಿದೆ ಎಲ್ಲಾ ಕೊರತೆಗಳನ್ನು ಬಗೆಹರಿಸುವಲ್ಲಿ ಪ್ರಯತ್ನಿಸಿದ್ದೇವೆ ಎಂದರು.

ಈ ವೇಳೆ ತಾಲೂಕಿನ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಕಾಂಗ್ರೆಸ್ ಉಭಯ ಘಟಕದ ಅಧ್ಯಕ್ಷರುಗಳಾದ ರಂಜನ್ ಗೌಡ, ಶೈಲೇಶ್ ಕುಮಾರ್, ಕಾರ್ಮಿಕ ಮುಖಂಡ ಬಿ.ಎಮ್ ಭಟ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.