ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ 2023 – 24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರ್ಕಾರ ಮತ್ತು ವಿಜ್ಞಾನ – ಪರಿಸರ, ಸಾಹಿತ್ಯ, ಗಣಿತ , ಹಿಂದಿ ಸಂಘಗಳ ಉದ್ಘಾಟನ ಸಮಾರಂಭ ಜರಗಿತು.
ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ದೊಂಪದಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಆಚಾರ್ ರವರು ಸರಕಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ವಿದ್ಯೆ ಅಳಿಸಲಾರದ ಸಂಪತ್ತು. ಶಾಲೆಯಲ್ಲಿ ಪಾಠದೊಂದಿಗೆ ವಿದ್ಯಾರ್ಥಿಗಳು ವಾಚನಾಲಯದ ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಮಾಧ್ಯಮಗಳ ಹಾವಳಿಯಿಂದ ವಿದ್ಯಾರ್ಥಿಗಳು ದೂರವಿರುವಂತಾಗಬೇಕು ಎಂದು ಹೇಳಿದರು. ಮುಖ್ಯೋಪಾಧ್ಯಾಯರು ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸರ್ಕಾರದ ನಾಯಕಿ ಅಮೂಲ್ಯ ಪಿ. ಶೈಕ್ಷಣಿಕ ವರ್ಷದ ಚಟುವಟಿಕೆಗಳ ಮಸೂದೆ ಮಂಡಿಸಿದರು.
ಮಾರ್ಗದರ್ಶಿ ಶಿಕ್ಷಕರಾದ ಸುಮನ್ ಯು ಎಸ್ ರವರ ನಿರ್ದೇಶನದಲ್ಲಿ ಸಮಾರಂಭ ಜರಗಿತು. ವಿದ್ಯಾರ್ಥಿಗಳಾದ ಲೋಕೇಶ್ ಸ್ವಾಗತಿಸಿ, ನಿರೀಕ್ಷಾ ವಂದಿಸಿದರು, ವಿದ್ಯಾರ್ಥಿ ಸರಕಾರದ ಸಭಾಪತಿ ಕೀರ್ತನಾ ಕಾರ್ಯಕ್ರಮ ನಿರ್ವಹಿಸಿದರು.