25.7 C
ಪುತ್ತೂರು, ಬೆಳ್ತಂಗಡಿ
May 17, 2025
ತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ: ಶ್ರೀ ಮಂ.ಸ್ವಾ. ಅ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಆಚರಿಸಲಾಯಿತು.

ಕ್ಷೇತ್ರ ದ ಅಮೃತ ವರ್ಷಿಣಿ ಸಭಾಭವನದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು.

ಉಜಿರೆಯ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿನಿಯರಾದ ಕುಮಾರಿ ದಿಶಾ ಪೂಜಾರಿ ಮತ್ತು ತಂಡ ಯೋಗ ತರಬೇತಿ ನೀಡಿದರು. ಶಿಕ್ಷಕಿ ಪೂರ್ಣಿಮಾ ಜೋಷಿ ಸ್ವಾಗತಿಸಿ ವಂದಿಸಿದರು.

ತರಬೇತಿ ನೀಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೈಹಿಕ ಶಿಕ್ಷಕರಾದ ಸಂಜೀವ ಕೆ ಇವರು ಮುಖ್ಯ ಶಿಕ್ಷಕರಾದ ಸುಬ್ರಮಣ್ಯ ರಾವ್ ಇವರ ಮಾರ್ಗದರ್ಶನದಂತೆ ಕಾರ್ಯಕ್ರಮವನ್ನು ಸಂಯೋಜಿಸಿದರು.

Related posts

ಸುಲ್ಕೇರಿ ಮಹಾಮಾಯಿ ದೇವಸ್ಥಾನಕ್ಕೆ ಬ್ರಹ್ಮಗಿರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಿಂದ ಚೆಂಡೆ, ದೀಪಾ, ಮತ್ತು ಕಹಳೆ ಸಮರ್ಪಣೆ

Suddi Udaya

ಬೆಳ್ತಂಗಡಿ: ಪವರ್ ಆನ್ ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಪೌರ ಕಾರ್ಮಿಕರು

Suddi Udaya

ತಣ್ಣೀರುಪಂಥ ವಲಯದ ಕರಾಯ ಕಲ್ಲೇರಿ, ಕುಪ್ಪೆಟ್ಟಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಅಳದಂಗಡಿಯಲ್ಲಿ ಹಿಂದೂ ರುದ್ರಭೂಮಿಗಾಗಿ ಮೀಸಲಾಗಿರುವ ಜಾಗವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya

ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಿಳಾ ವೇದಿಕೆಯಿಂದ ಆಟಿಕೂಟ ಆಚರಣೆ

Suddi Udaya

ಬೆಳ್ತಂಗಡಿ ಮಾತೃಶ್ರೀ ಟೆಕ್ಸ್ ಟೈಲ್ಸ್ ನಲ್ಲಿ ಆಷಾಢ ಆಟಿ ಸೇಲ್, ಗ್ರಾಹಕರಿಂದ ಉತ್ತಮ‌ ಪ್ರತಿಕ್ರಿಯೆ

Suddi Udaya
error: Content is protected !!