ನೆರಿಯ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ವಸಂತಿ ಅವರ ಅಧ್ಯಕ್ಷತೆಯಲ್ಲಿ ಜೂ.28 ರಂದು ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಅವರು ಗ್ರಾಮಸಭೆಯನ್ನು ಮುನ್ನಡೆಸಿದರು.
ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನವಸತಿಯಿರುವ ಪ್ರದೇಶಕ್ಕೆ ದಾರಿದೀಪ ವಿಸ್ತರಣೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಚರ್ಚೆಗಳು ನಡೆದವು.

ಗ್ರಾಮಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮ ಎ.ಎಸ್, ಕಾರ್ಯದರ್ಶಿ ಅಜಿತ್ ಎಂ.ಬಿ, ಪಂಚಾಯತ್ ಉಪಾಧ್ಯಕ್ಷೆ ಕುಶಲ, ಸದಸ್ಯರರಾದ ರಮೇಶ್ ಕೆ.ಎಸ್, ರೀನಾ, ಸಜಿತಾ, ಮಾಲತಿ, ದಿನೇಶ್ ಕುಮಾರ್, ಪಿ ಮಹಮ್ಮದ್, ಮರಿಯಮ್ಮ, ವೇದಾವತಿ, ಬಿ.ಅಶ್ರಫ್, ಸಚಿನ್ ಕೆ.ಆರ್, ಹೂವಯ್ಯ ಗೌಡ,ಸವಿತಾ, ಸುಮಂಗಳ, ತೋಮಸ್, ಅಶೋಕ ಮತ್ತು ವಿವಿಧ ಇಲಾಖೆಯ ಇಲಾಖಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಗ್ರಾಮಸ್ಥರು, ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.