ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಹಾಗೂ ಜೂನಿಯರ್ ಜೇಸಿ, ದೇವಸ್ಥಾನದ ಆಡಳಿತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆವರಣದಲ್ಲಿ ಜೂ. 29 ರಂದು ಔಷಧೀಯ ಸಸ್ಯಗಳು ಸೇರಿದಂತೆ ಹೂದೋಟ ನಿರ್ಮಾಣ , ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು.
ಕಳೆಂಜ ಶಾಖೆ ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಗಿಡವನ್ನು ನೆಡುವ ಮೂಲಕ ಉದ್ಘಾಟಿಸಿದರು.ಯುವ ಜೇಸಿ ಕು. ದೀಕ್ಷಾ ಅಧ್ಯಕ್ಷತೆ ವಹಿಸಿದ್ದರು. ಕೌಕ್ರಾಡಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೆಸಿಂತಾ ಡಿ ಸೋಜ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.
ಸೌಂದರೀಕರಣ, ಔಷಧೀಯ ಸಸ್ಯಗಳು ಸೇರಿದಂತೆ 27 ವಿಧದ 50 ಗಿಡಗಳನ್ನು ನೆಡಲಾಯಿತು.
ಜೇಸಿ ಸದಸ್ಯರಾದ ಸಂತೋಷ ಕುಮಾರ್ ಜೈನ್, ಅಕ್ಷತ್ ರೈ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಕುಸುಮಾಕರ, ಕೇಶವ ಗೌಡ ದರ್ಖಾಸು, ವಸಂತ ಪೂಜಾರಿ, ರುಕ್ಮಯ ಗೌಡ, ಕೇಶವ ಗೌಡ ಮಲ್ಲಜಾಲು, ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮುರಳೀಧರ, ಗೋಪಾಲಕೃಷ್ಣ ನೇರೆಂಕಿ ಪಾಲ್, ಅರಣ್ಯ ಇಲಾಖೆಯ ಸಿಬ್ಬಂದಿ ವಿನಯ್ ಕುಮಾರ್, ಶ್ರೀಮತಿ ಇಂದಿರಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಶ್ರವಣ್ ಜೇಸಿ ವಾಣಿ ವಾಚಿಸಿದರು. ಆಡಳಿತ ಸಮಿತಿಯ ಅಧ್ಯಕ್ಷ ಕೆ. ಶ್ರೀಧರ್ ರಾವ್ ಸ್ವಾಗತಿಸಿದರು. ಹಿರಿಯ ಜೇಸಿ ಜೋಸೆಫ್ ಪಿರೇರಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕು. ಕ್ರಪಾ ಅವರು ವಂದಿಸಿದರು.