September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾಲಾಡಿ ಗ್ರಾಮ ಸಭೆ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಗ್ರಾಮಸ್ಥರ ಒತ್ತಾಯ

ಮಾಲಾಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ‌ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಸ್ಸಾನ ಡಿಸೋಜಾ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜೂ. 30 ರಂದು ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್ ರವರು ಗ್ರಾಮಸಭೆಯನ್ನು ಮುನ್ನಡೆಸಿದರು.

ಗ್ರಾಮೀಣ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ನೀರು, ಚರಂಡಿ,ರಸ್ತೆಯ ಬಗ್ಗೆ ಹಲವಾರು ಚರ್ಚೆಗಳು ನಡೆದವು.

ಗ್ರಾಮಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ರಾಜಶೇಖರ ರೈ, ಕಾರ್ಯದರ್ಶಿ ಯಶೋಧರ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷ ದಿನೇಶ್ ಡಿ ಕರ್ಕೆರಾ, ಸದಸ್ಯರರಾದ ಬೆನೆಡಿಕ್ಟ್ ಮಿರಾಂದ, ವಸಂತ ಪೂಜಾರಿ, ಸೆಲೆಸ್ಟಿನ್ ಡಿಸೋಜಾ, ಜಯಂತಿ, ತುಳಸಿ ಬಿ, ಕೆ. ಸುಧಾಕರ ಆಳ್ವ,ಪುನೀತ್ ಕುಮಾರ್, ರಾಜೇಶ, ಉಮೇಶ, ಐರಿನ್ ಮೋರಾಸ್, ಫರ್ಯಾನ ಅಲ್ತಾಫ್,ವಿದ್ಯಾ ಪಿ ಸಾಲಿಯಾನ್,ಎಸ್.ಬೇಬಿ ಸುವರ್ಣ,ರುಬೀನಾ ನವಾಝ್, ಗುಲಾಬಿ, ದಿನೇಶ್ ಮತ್ತು ವಿವಿಧ ಇಲಾಖೆಯ ಇಲಾಖಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಗ್ರಾಮಸ್ಥರು, ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಇಂದಬೆಟ್ಟು: ಸಿಡಿಲು ಬಡಿದು ಮಹಿಳೆ ಅಸ್ವಸ್ಥ

Suddi Udaya

ಕುತ್ಲೂರು: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ವಿಶೇಷ ಚೇತನರವರಿಗೆ ಪರಿಕರ ವಿತರಣೆ

Suddi Udaya

ಕಿರುತೆರೆ ನಿರ್ದೇಶಕ ಸುಭಾಷ್ ಅರ್ವರವರಿಗೆ ಉತ್ತಮ ನಿರ್ದೇಶಕ ಅನುಬಂಧ ಆವಾರ್ಡ್-2023: ಮಂಗಳ ಗೌರಿ, ರಂಗನಾಯಕಿ, ಗೀತಾ, ಕೆಂಡಸಂಪಿಗೆ ಧಾರಾವಾಹಿ ನಿರ್ದೇಶನ

Suddi Udaya

ಸರಕಾರಿ ಅರಣ್ಯ ಭೂಮಿಯನ್ನು ಅತಿ ಕ್ರಮಿಸಿ ಕೃಷಿ ಮಾಡಿದ ಪ್ರಕರಣ : ಹೈಕೋರ್ಟ್ ಸೂಚನೆ ಮೇರೆಗೆ ಅರಣ್ಯ ಇಲಾಖೆಯಿಂದ ತೆರವು

Suddi Udaya

ಪಿಲ್ಯ: ಕೋಳಿ ಅಂಕಕ್ಕೆ ವೇಣೂರು ಪೊಲೀಸರ ದಾಳಿ : ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳ ವಶ

Suddi Udaya

ಅಂಬರ ಮರ್ಲೆರ್” ರಿಟರ್ನ್ಸ್ ತುಳು ಧಾರಾವಾಹಿಯ ತಂಡಕ್ಕೆ ಶಾಸಕ ಹರೀಶ್ ಪೂಂಜರವರಿಂದ ಶುಭ ಹಾರೈಕೆ

Suddi Udaya
error: Content is protected !!