ವೇಣೂರು ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ವೇಣೂರು ನೂತನ ಬಸ್ ತಂಗುದಾಣದ ಸಭಾಭವನದಲ್ಲಿ ಜು. 1 ರಂದು ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಮಂಜಯ್ಯ ನಾಯ್ಕ್ ಗ್ರಾಮಸಭೆಯನ್ನು ಮುನ್ನಡೆಸಿದರು
ವೇಣೂರು ಪೇಟೆಯ ಎಲ್ಲಾ ಅಂಗಡಿಗಳಿಗೆ ಗ್ರಾಮಸಭೆಯ ನೋಟೀಸ್ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.ವಿಶೇಷವಾಗಿ ಬಜಿರೆ ಶಾಲೆಯ 8 ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕಲಾಪ ವೀಕ್ಷಣೆ ಮಾಡಿದರು.ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಚರ್ಚೆಗಳು ನಡೆದವು.
ಗ್ರಾಮ ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ , ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ, ಸದಸ್ಯರಾದ ಸುಮ, ಮಾಲತಿ, ಅರುಣ ಹೆಗ್ಡೆ, ಜಿನ್ನು, ಶೈಲಜಾ, ಸುಂದರ ಹೆಗ್ಡೆ, ಅನೂಪ್ ಜೆ ಪಾಯಸ್,ವೀಣಾ, ಉಮೇಶ್, ಹರೀಶ್,ಶುಭ, ಸುಚಿತ್ರಾ, ಜಯಂತಿ,ದಿನೇಶ, ವಸಂತಿ, ಸಂಭಾಷಿಣಿ, ಅರುಣ ಕ್ರಾಸ್ತಾ, ಮಲ್ಲಿಕಾ ಹೆಗ್ಡೆ,ಲೀಲಾವತಿ, ಸುಜಾತ, ಲೋಕಯ್ಯ ಪೂಜಾರಿ, ಸುನೀಲ್ ಕುಮಾರ್ ಪಿ ಮತ್ತು ವಿವಿಧ ಇಲಾಖೆಯ ಇಲಾಖಾಧಿಕಾರಿಗಳು, ಅಂಗನವಾಡಿ,ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಗ್ರಾಮಸ್ಥರು, ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.