26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಳೆಪೇಟೆ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

ಉಜಿರೆ: ಸರಕಾರಿ ಪ್ರೌಢಶಾಲೆ ಹಳೆಪೇಟೆ ಉಜಿರೆಯಲ್ಲಿ ಮಕ್ಕಳ ಹಕ್ಕುಗಳ ಸಂಘವನ್ನು ಜು.13ರಂದು ಉದ್ಘಾಟಿಸಲಾಯಿತು.

ಸಂಘದ ಉದ್ಘಾಟನೆಯನ್ನು ನೆರವೇರಿಸಿದ ಮುಖ್ಯೋಪಾಧ್ಯಾಯರಾದ ತ್ರಿವೇಣಿ ಬಾಯಿ ಮಕ್ಕಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಿದರು.

ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ಹಕ್ಕುಗಳ ಸಂಘದ ಸಂಯೋಜಕರಾದ ಚೈಲ್ಡ್ ರೈಟ್ಸ್ ಟ್ರಸ್ಟ್ ನ ವಿನೋದ್ ಪ್ರಸಾದ್ ಕಲ್ಲಾಜೆ , ಮಕ್ಕಳ ಹಕ್ಕುಗಳ ಸಂಘದ ವಾರ್ಷಿಕ ಚಟುವಟಿಕೆಗಳನ್ನು ವಿವರಿಸಿ ಸದಸ್ಯರಿಗೆ ಸಂಘದ ಸ್ಥೂಲ ಪರಿಚಯ ಮಾಡಿಕೊಟ್ಟು ಅವಕಾಶಗಳ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು ವತಿಯಿಂದ “ಮಕ್ಕಳ ಹಕ್ಕುಗಳ ಜಾರಿಯಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್” ಪುಸ್ತಕವನ್ನು ವಿತರಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಶಂಭುಶಂಕರ್ , ಸುಮ.ಪಿ, ಶಾರದಾ ಮರಾಠೆ ಹಾಗೂ ನಾರಾಯಣ ಗೌಡ ಉಪಸ್ಥಿತರಿದ್ದರು.

Related posts

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀರಾಮ ಪ್ರೌಢ ಶಾಲೆಯ ಬಾಲಕ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಹೀರ್ಯ “ಅಕ್ಷಯ ನಿಲಯ” ಗೃಹ ಪ್ರವೇಶ, ಭಜನಾ ಸೇವೆ ಹಾಗೂ ಯಕ್ಷಗಾನ ಬಯಲಾಟ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣರ ಸಮಾವೇಶ

Suddi Udaya

ನೀತಿ ಸಂಹಿತೆ ಜಾರಿ: ಬೆಳ್ತಂಗಡಿ ಶ್ರಮಿಕ ಶಾಸಕರ ಕಚೇರಿಯ ಕಾರ್ಯಚರಣೆ ಸ್ಥಗಿತ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಧರ್ಮಸ್ಥಳ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನಕ್ಕೆ ಚಾಲನೆ

Suddi Udaya
error: Content is protected !!