32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಟಿಬಿ ಕ್ರಾಸ್ ಬಳಿ ಸ್ಮಾರ್ಟ್ ಎಂಟರ್ಪ್ರೈಸಸ್ ಶುಭಾರಂಭ

ಉಜಿರೆ: ಇಲ್ಲಿನ ಟಿ.ಬಿ ಕ್ರಾಸ್ ರಸ್ತೆಯ ಪಕ್ಕದಲ್ಲಿರುವ ಮನ್ಹಾ ಕಾಂಪ್ಲೆಕ್ಸ್ ನಲ್ಲಿ ಸ್ಮಾರ್ಟ್ ಎಂಟರ್ಪ್ರೈಸಸ್ ಪ್ರಾರಂಭಗೊಂಡಿದೆ.

ನೂತನ ಸಂಸ್ಥೆಯನ್ನು ಮಾಲಕರಾದ ನವೀನ್ ಯೋಗೀತಾ ಮತ್ತು ಉಮೇಶ್ ಕವಿತಾ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಸಲೀಂ, ಸ್ಥಳಿಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭಹಾರೈಸಿದರು.

ಸಂಸ್ಥೆಯು ನಿರಂತರ 40 ವಾರಗಳ ಡ್ರಾ 140 ಕ್ಕೂ ಅಧಿಕ ಬಹುಮಾನಗಳು ಪಡೆಯುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ. ಪ್ರತಿ ವಾರ ರೂ 200 ಪಾವತಿಸಿ ಬಹುಮಾನ ಗೆಲ್ಲುವ ಅವಕಾಶವಿದೆ. ಹತ್ತು ತಿಂಗಳ ಯೋಜನೆ ಇದಾಗಿದೆ.

ವಿವಿಧ ಗೃಹೋಪಯೋಗಿ ವಸ್ತುಗಳು ಅತೀ ಕಡಿಮೆ ದರದಲ್ಲಿ ಸಂಸ್ಥೆಯಲ್ಲಿ ಲಭ್ಯವಿದೆಯೆಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಆನ್ಸ್ ಕ್ಲಬ್ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭ: ನೂತನ ಅಧ್ಯಕ್ಷೆಯಾಗಿ ಗಾಯತ್ರಿ ಶ್ರೀಧರ್ ಹಾಗೂ ಕಾರ್ಯದರ್ಶಿಯಾಗಿ ಡಾ.ವಿನಯಾ ಕಿಶೋರ್ ಅಧಿಕಾರ ಸ್ವೀಕಾರ

Suddi Udaya

ಸವಣಾಲು ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಉಜಿರೆಯಲ್ಲಿ ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಶೇಖ್ ಲತೀಫ್ ರವರಿಗೆ ಸೇವಾ ನಿವೃತ್ತಿ

Suddi Udaya

ಸವಣಾಲು ನೇತಾಜಿ ಸುಭಾಷ್ ಚಂದ್ರ ಬೋಸ್ ಸ.ಪ್ರೌ. ಶಾಲೆಯ ವಿದ್ಯಾರ್ಥಿನಿ ಕು| ಅಪೇಕ್ಷಾ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ವಿದ್ಯಾರ್ಥಿವೇತನಕ್ಕೆ ಆಯ್ಕೆ

Suddi Udaya

ಅಪಘಾತದಲ್ಲಿ ಸಾವು; ನವೋದಯ ಗುಂಪಿನ ಸದಸ್ಯೆಗೆ 1 ಲಕ್ಷ ರೂ. ವಿಮೆ ಚೆಕ್ ಹಸ್ತಾಂತರ

Suddi Udaya
error: Content is protected !!