ಬೆಳ್ತಂಗಡಿ : ಸರಕಾರಿ ಪದವಿ ಪೂರ್ವ ಕಾಲೇಜು ನಡ ಇಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೂನಿಯರ್ ಜೆಸಿ ಸಪ್ತಾಹ ಉದ್ಘಾಟನೆಗೊಂಡಿತು.
ನಡ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಸಪ್ತಾಹ ಉದ್ಘಾಟಿಸಿ ಜೆಸಿಐ ಬೆಳ್ತಂಗಡಿ ಈ ಬಾರಿ ಸರಕಾರಿ ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸ ತಂದಿದೆ, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಸಂಸ್ಥೆ ಜೆಸಿಐನ ಬಗ್ಗೆ ಒಲವು ಇನ್ನಷ್ಟು ಜಾಸ್ತಿ ಆಗುವಲ್ಲಿ ಈ ಬಾರಿಯ ಅಧ್ಯಕ್ಷರು ಮತ್ತು ತಂಡ ಯಶಸ್ವಿಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೂನಿಯರ್ ಜೆಸಿ ವಿಭಾಗದ ಅಧ್ಯಕ್ಷರಾದ ರಾಮಕೃಷ್ಣ ಶರ್ಮಾ ವಹಿಸಿದ್ದರು.
ಸಾಫ್ಟ್ ಸ್ಕಿಲ್ ಟ್ರೈನರ್ ಪ್ರತಿಭಾವಂತ ಕಲಾವಿದ ಚಂದ್ರಹಾಸ್ ಬಳಂಜ ಮಾತುಗಾರಿಕೆ ಕಲೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಶಂಕರ್ ರಾವ್ ಸ್ವಾಗತಿಸಿ ಸಪ್ತಾಹದ ಕಾರ್ಯಕ್ರಮ ಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ರೆಡ್ ಕ್ರಾಸ್ ಘಟಕದ ನಿರ್ದೇಶಕರಾದ ಮೋಹನ್ ಗೌಡ, ರೇಂಜರ್ಸ ಘಟಕದ ಆರ್. ಎಲ್ ವಸಂತಿ ಕುಳಮರ್ವ ಜೆಸಿಐ ಬೆಳ್ತಂಗಡಿಯ ನಿಕಟ ಪೂರ್ವಅಧ್ಯಕ್ಷರಾದ ಪ್ರಸಾದ್ ಬಿ. ಎಸ್. ಕಾರ್ಯದರ್ಶಿ ಉಪಸ್ಥಿತರಿದ್ದರು.
ಘಟಕದ ಪೂರ್ವಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ವೇದಿಕೆಗೆ ಗಣ್ಯರನ್ನು ಬರಮಾಡಿಕೊಂಡರು, ಕು ನಿಶ್ಚಿತ ಜೆಸಿ ವಾಣಿ ಉದ್ಘೋಷಿಸಿದರು, ಉಪನ್ಯಾಸಕರಾದ ಮೋಹನ್ ಗೌಡ ಧನ್ಯವಾದವಿತ್ತರು.
ಘಟಕದ ಪೂರ್ವಧ್ಯಕ್ಷರುಗಳಾದ ನಾರಾಯಣ ಶೆಟ್ಟಿ, ಚಿದಾನಂದ ಇಡ್ಯಾ, ಕಾಲೇಜಿನ ಉಪನ್ಯಾಸಕ ವೃಂದ, ಜೂನಿಯರ್ ಜೆಸಿ ಸದಸ್ಯರುಗಳಾದ ಕು ಕನ್ನಿಕಾ, ಕವನ್ ರಾಜ್, ವಿನ್ಯಾಸ್, ಸಮರ್ಥ್, ಅಶ್ವಿತ್ ಉಪಸ್ಥಿತರಿದ್ದರು.