ಬೆಳ್ತಂಗಡಿ ತಾಲೂಕಿನ ವಿವಿದೆಡೆ ಧಾರಕಾರ ಗಾಳಿ ಮಳೆ, ವ್ಯಾಪಕ ಹಾನಿ: ಧರೆಗುರುಳಿದ ಮರ, ಗುಡ್ಡ ಕುಸಿತ, ಮನೆಗಳಿಗೆ ಹಾನಿ. ವಿದ್ಯುತ್ ವ್ಯತ್ಯಯ, ತೋಟಕ್ಕೆ ನುಗ್ಗಿದ ನೀರು: ಅಧಿಕಾರಿಗಳ ಭೇಟಿ, ಪರೀಶೀಲನೆ, ಹತೋಟಿಗೆ ಕ್ರಮ,

Suddi Udaya

Updated on:

ಬೆಳ್ತಂಗಡಿ ತಾಲೂಕಿನ ವಿವಿದೆಡೆ ಗಾಳಿ ಸಹಿತ ಧಾರಕಾರ ಮಳೆಯಾಗುತ್ತಿದ್ದು ಹಲವಡೆ ಹಾನಿಯಾಗಿದೆ.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜೀವನ ಕಷ್ಟಕರವಾಗಿದೆ.ತೆಂಗು,ಅಡಿಕೆಮರ ಹಾಗೂ ಇತರ ಮರಗಳು ಧರೆಗುರುಳಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ‌.ಮಳೆಯ ಆರ್ಭಟಕ್ಕೆ ಮನೆಗಳ ಹಂಚುಗಳು ಮತ್ತು ಮೇಲ್ಛಾವಣಿಗಳು ಹಾರಿ ಹೋಗಿವೆ.

ಪಡಂಗಡಿ ಗ್ರಾಮದ ರಿಚರ್ಡ್ ಅವರ ಮನೆಗೆ ಗುಡ್ಡ ಕುಸಿದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.ಇಂದಬೆಟ್ಟು ಗ್ರಾಮದ ಜಾಕೋಬ್ ಮೊನಿಸ್ ರವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಗೋಡೆ ಬಿರುಕು ಬಿಟ್ಟಿದೆ.ಮೊಗ್ರು ಗ್ರಾಮದ ಪರಕ್ಕಾಜೆ ಎಂಬಲ್ಲಿ ಶೀನಪ್ಪ ಗೌಡ ರವರ ಮನೆಯ ಪಕ್ಕದಲ್ಲಿರುವ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ.

ಮಾಲಾಡಿ ಗ್ರಾಮದ ಅಶೋಕ್ ಶೆಣೈ ಮನೆಯ ಕಂಪೌಂಡ್ ಬಿದ್ದು ಸಮಸ್ಯೆ ಎದುರಾಗಿದೆ.ಪಜಿರಡ್ಕದಲ್ಲಿ ಎಸ್.ಸಿ ಕಾಲೋನಿ ಶಂಕರರವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾದ ಘಟನೆ ಸಂಭವಿಸಿದೆ.ಪಡಂಗಡಿ ಬಾಬು ರವರ ದನದ ಹಟ್ಟಿಯ ಶೀಟ್ ಗಾಳಿಗೆ ಹಾರಿಹೋಗಿದೆ ಹಾಗೂ ಕಲ್ಯಾಣಿಯವರ ಕೊಟ್ಟಿಗೆಗೆ ಗಾಳಿ ಮಳೆಯಿಂದ ತೊಂದರೆಯಾಗಿದೆ.

ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಕಂರ್ಬಿತ್ತಿಲ್ ಶೇಖರ್ ಶೆಟ್ಟಿಯವರ ಹೊಸಮನೆಗೆ ಗುಡ್ಡ ಕುಸಿದು ಹಾನಿ. ಮಾಲಾಡಿ ಜನತಾ ಕಾಲೋನಿ ಶಕುಂತಾಳರವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ‌. ವೇಣೂರಿನಲ್ಲಿ ಮೈಮುನಾ ರವರ ಮನೆಗೆ ಮರ ಬಿದ್ದು ಹಂಚು ಬಿದ್ದು ವಾಸ ಮಾಡಲು ತೊಂದರೆಯಾಗಿದೆ.

ಸೋಣಂದೂರು ಗ್ರಾಮದ ಸಬರಬೈಲು ಅಣ್ಣಿಮೂಲ್ಯರ ಶೌಚಾಲಯದ ಗೋಡೆ ಕುದಿದು ಬಿದ್ದಿದೆ.ಮಿತ್ತಬಾಗಿಲು ಗ್ರಾಮದ ಕೆ. ಅಬೂಬಕ್ಕರ್ ರವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಗಾಳಿ ಮಳೆಗೆ ಕುಸಿದು ಬಿದ್ದು ಮನೆಯು ಹಾನಿಗೊಂಡಿರುತ್ತದೆ.ಗ್ರಾಮಾಂತರ ಪ್ರದೇಶದ ಹಲವು ಕಡೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು ನೀರು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.ಸೂಳಬೆಟ್ಟು ಪಲ್ಗುಣಿ ನದಿಯ ಪಕ್ಕ ಅಡಿಕೆ ತೋಟಗಳಿಗೆ ನೀರು ನುಗ್ಗಿ ನಷ್ಟ ಉಂಟಾಗಿದೆ. ಪೆರಾಡಿ ಗ್ರಾಮದ ಪಂಬುದೊಟ್ಟು ಎಂಬಲ್ಲಿ ತೋಡಿನ ನೀರು ಪಕ್ಕದ ಗದ್ದೆ ಮತ್ತು ತೋಟಕ್ಕೆ ನುಗ್ಗಿ ರೈತರಿಗೆ ವ್ಯಾಪಕ ನಷ್ಟ ಉಂಟಾಗಿರುತ್ತದೆ.ಹಚ್ಚಾಡಿ, ಕೊಪ್ಪದ ಗಂಡಿ ಕಿಲ್ಲೂರು ಸಂಪರ್ಕ ಸೇತುವೆ ಹಾಗೂ ಇತರ ನದಿಗಳಲ್ಲಿ ನೀರಿನ ಮಟ್ಟ ಹೆಚ್ವಿದೆ.

Leave a Comment

error: Content is protected !!