ರೆಖ್ಯ : ಮರದ ಕೊಂಬೆ ಮುರಿದು ಬಿದ್ದು ಮನೆಯ ಛಾವಣಿಗೆ ಹಾನಿ: ಶಿರಾಡಿ ಗ್ರಾಮ ವಿಕಾಸ ತಂಡ ಹಾಗೂ ಕೊಕ್ಕಡ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ದುರಸ್ತಿ ಕಾರ್ಯ

Suddi Udaya

Updated on:

ರೆಖ್ಯಾ :ಅರಸಿನಮಕ್ಕಿ ಗ್ರಾಮಪಂಚಾಯತ್ ವ್ಯಾಪ್ತಿಯ ರೆಖ್ಯ ಗ್ರಾಮದ ಪರ್ಕಳ ಎಂಬಲ್ಲಿನ ಶಾಲಿನಿ ಎಂಬ ಮಹಿಳೆಯ ಮನೆ ಮೇಲೆ ಮರದ ಕೊಂಬೆ ಮುರಿದು ಬಿದ್ದು ಮನೆಯ ಛಾವಣಿ (ಶೀಟ್)ಹಾನಿಯಾಗಿದೆ. ಅರಸಿನಮಕ್ಕಿ ಪಂಚಾಯತ್ ಅಧ್ಯಕ್ಷ ನವೀನ್ ಕೆ. ರವರ ಮನವಿ ಮೇರೆಗೆ, ಶಿರಾಡಿ ಗ್ರಾಮ ವಿಕಾಸ ತಂಡದ ಅಧ್ಯಕ್ಷ ಸುವಿನ್ ಡಿ ಕುದ್ಕೋಳಿ ಇವರ ನೇತೃತ್ವದಲ್ಲಿ ಶಿರಾಡಿ ಗ್ರಾಮ ವಿಕಾಸ ತಂಡದ ಸದಸ್ಯರು ಹಾಗೂ ಕೊಕ್ಕಡ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸ್ಥಳಕ್ಕೆ ತೆರಳಿ ಅಪಾಯಕಾರಿಯಾಗಿದ್ದ ಮರದ ಉಳಿದ ಗೆಲ್ಲುಗಳನ್ನು ತೆರವು ಗೊಳಿಸಿ ಛಾವಣಿಗೆ ಹೊಸ ಸಿಮೆಂಟ್ ಶೀಟ್ಗಳನ್ನು ಅಳವಡಿಸಿಕೊಟ್ಟರು.

ಸುರಿಯುತ್ತಿರುವ ಮಳೆಯಲ್ಲಿಯೇ ನಡೆದ ಈ ಕಾರ್ಯಾಚರಣೆಯಲ್ಲಿ ಶಿರಾಡಿ ಗ್ರಾಮ ವಿಕಾಸ ತಂಡದ ಸದಸ್ಯರಾದ ಹೊನ್ನಪ್ಪ ಕುದ್ಕೋಳಿ, ಧರ್ಮಪಾಲ ಕುದ್ಕೋಳಿ, ಗಂಗಾಧರ ಕುದ್ಕೋಳಿ, ಧನುಷ್ ಕುದ್ಕೋಳಿ, ಕಿಶಾನ್ ಕುದ್ಕೋಳಿ, ಘಟಕ ಪ್ರತಿನಿಧಿ ಆನಂದ ನಾಯ್ಕ್ ಅರಸಿನಮಕ್ಕಿ, ಸದಸ್ಯರುಗಳಾದ ಅವಿನಾಶ್ ಭಿಡೆ, ಕೃಷ್ಣಪ್ಪ ಗೌಡ ಮುಚ್ಚಿರಡ್ಕ,ಕುಶಾಲಪ್ಪ ಗೌಡ ಬದ್ರಿಜಾಲು ,ಚೇತನ್ ರೆಖ್ಯ, ಉಜಿರೆ ಘಟಕದ ಸಚಿನ್ ಭಿಡೆ ಹಾಗೂ ರಮೇಶ್ ಬೈರಕಟ್ಟ ಭಾಗವಹಿಸಿದರು. .

ಈ ಸಂದರ್ಭದಲ್ಲಿ ವಿಶ್ವನಾಥ ಗೌಡ ಪರ್ಕಳ ಹಾಗೂ ಮನೆಯವರು, ಅರಸಿನಮಕ್ಕಿ ಪಂಚಾಯತ್ ಸದಸ್ಯ ಕಿರಣ್ ಕೆರೆಜಾಲು ಸಹಕರಿಸಿದರು.

Leave a Comment

error: Content is protected !!