ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ಮತ್ತು ಮೆನ್ಸ್ ಪಾರ್ಲರ್ ಮೆನೇಜ್‌ಮೆಂಟ್ ತರಬೇತಿಗಳ ಸಮಾರೋಪ ಸಮಾರಂಭ

Suddi Udaya

ಉಜಿರೆ : ಅವಕಾಶಗಳು ಜೀವನದಲ್ಲಿ ಬಹಳ ಅಪರೂಪಕ್ಕೆ ದೊರೆಯುತ್ತದೆ, ಆದರೆ ನಿಮಗೆ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡರೆ ಮುಂದಿನ ಜೀವನದಲ್ಲಿ ಬದಲಾವಣೆಗಳನ್ನು ತರಲು ಸಾದ್ಯ. ಬಡತನದಲ್ಲಿ ಹುಟ್ಟುವುದು ಸ್ವಾಭಾವಿಕ ಆದರೆ ಬಡತನದಲ್ಲೇ ಸಾಯಬೇಕಾಗಿಲ್ಲ, ಈ ರುಡ್‌ಸೆಟ್ ಸಂಸ್ಥೆಯು ನಿಮಗೆ ಕೊಡುತ್ತಿರುವ ತರಬೇತಿಯನ್ನು ಬಳಸಿಕೊಂಡು ಸ್ವಾವಲಂಬನೆಯ ಬದುಕನ್ನು ಬದುಕಲು ಪ್ರಯತ್ನಿಸಿ. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಠಿ ಚಿಂತನೆ ಇವತ್ತಿನ ಸರಕಾರಗಳ ಕಾರ್ಯಕ್ರಮದ ಅನುಷ್ಠಾನಕ್ಕೆ ಪ್ರೇರಣೆಯಾಗಿದೆ ರುಡ್‌ಸೆಟ್ ಸಂಸ್ಥೆಯಲ್ಲಿ ಸಿಗುವ ಕೌಶಲ್ಯ ತರಬೇತಿಯು ಕೇವಲ ಒಂದು ಹೊತ್ತಿನ ಹಸಿವನ್ನು ನೀಗಿಸುವ ಕಾರ್ಯಕ್ರಮವಲ್ಲದೇ ಜೀವನದುದ್ದಕ್ಕೂ ಬದುಕನ್ನು ಕಟ್ಟಿಕೊಳ್ಳಲು ಯುವಜನತೆಗೆ ಒಂದು ಉತ್ತಮ ವೇದಿಕೆಯಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಸಭಾಪತಿಯಾದ ಯು.ಟಿ. ಖಾದರ್ ರವರು ಅಭಿಪ್ರಾಯಪಪಟ್ಟರು.

ಅವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ಮತ್ತು ಮೆನ್ಸ್ ಪಾರ್ಲರ್ ಮೆನೇಜ್‌ಮೆಂಟ್ ತರಬೇತಿಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪುರರವರು ಅಧ್ಯಕ್ಷ ಸ್ಥಾನ ವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್‌ರವರು ಅತಿಥಿಗಳನ್ನು ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿದರು.

ಹಿರಿಯ ಉಪನ್ಯಾಸಕರಾದ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರ್ವಹಿಸಿ, ಹಿರಿಯ ಉಪನ್ಯಾಸಕಿ ಶ್ರೀಮತಿ ಅನಸೂಯರವರು ಧನ್ಯವಾದವಿತ್ತರು. ಕೆಲವು ಶಿಬಿರಾರ್ಥಿಗಳು ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮಗಳಲ್ಲಿ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ತರಬೇತಿಯ 35 ಮತ್ತು ಮೆನ್ಸ್ ಪಾರ್ಲರ್ ಮೆನೇಜ್‌ಮೆಂಟ್ ತರಬೇತಿಯ 35 ಶಿಭಿರಾರ್ಥಿಗಳು ಭಾಗವಹಿಸಿದರು.

Leave a Comment

error: Content is protected !!