ಬೆಳ್ತಂಗಡಿ: ಸುವರ್ಣ ಸಂಭ್ರಮ ಆಚರಣೆಯಲ್ಲಿರುವ ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಜು.30 ರಂದು ಬೆಳ್ತಂಗಡಿ ತಾಲೂಕಿನ ಕನ್ಯಾಡಿ -1 ಗ್ರಾಮದ ಪಡ್ಪು ಎಂಬಲ್ಲಿರುವ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ,ಸುವರ್ಣ ಸೇವಾ ವನಮಹೋತ್ಸವ ಕಾರ್ಯಕ್ರಮವನ್ನು ಲ| ಉಮೇಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಡ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ವಿಜಯ ಗೌಡ ರವರು ವನಮಹೋತ್ಸವ ಕಾರ್ಯಕ್ರಮದ ಬಗ್ಗೆ ತಿಳಿಯಪಡಿಸಿದರು. ಅಧ್ಯಕ್ಷರಾದ ಲಯನ್ ಉಮೇಶ್ ಶೆಟ್ಟಿ ಯವರು ವನಮಹೋತ್ಸವ ಕಾರ್ಯಕ್ರಮದ ವಿಶೇಷತೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಲಯನ್ ಅನಂತಕೃಷ್ಣ, ಕೋಶಾಧಿಕಾರಿ ಲಯನ್ ಸುಭಾಷಿಣಿ, ಜೊತೆ ಕಾರ್ಯದರ್ಶಿ ಲಯನ್ ದತ್ತಾತ್ರೇಯ ಗೊಲ್ಲ, ಲಯನ್ ಹೆಚ್ .ರಾಮಕೃಷ್ಣ ಗೌಡ, ಲಯನ್ ಸುರೇಶ್ ಶೆಟ್ಟಿ ಲಾಯಿಲ, ಲಯನ್ ರವೀಂದ್ರ ಶೆಟ್ಟಿ ಬಳಂಜ, ನೂತನ ಸದಸ್ಯರುಗಳಾದ ಲಯನ್ ಶಿಲ್ಪಶ್ರೀ, ಲಯನ್ ದೇವಿದಾಸ್ ಶೆಟ್ಟಿ ಹಿಬರೋಡಿ, ಲಯನ್ ಗೋಪಾಲಕೃಷ್ಣ ಕಾಂಚೋಡು, ಪಡ್ಪು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಪ್ರವೀಣ್ ವಿ.ಜಿ, ಅರಣ್ಯ ವೀಕ್ಷಕರಾದ ತನಿಯಪ್ಪ ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಸದಸ್ಯರು ಅರಣ್ಯದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಸಂಯೋಜಕ ಲ| ವಸಂತ ಶೆಟ್ಟಿ ಶ್ರದ್ಧಾ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಲಯನ್ ಧರಣೇಂದ್ರ ಕೆ. ಜೈನ್ ರವರು ಧನ್ಯವಾದವಿತ್ತರು.