26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪುದುವೆಟ್ಟು : ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

ಪುದುವೆಟ್ಟು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಯಕ್ಷಗಾನ ತರಬೇತಿಯ ಪ್ರಾರಂಭೋತ್ಸವವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಬಿ.ಸೋಮಶೇಖರ್ ಶೆಟ್ಟಿರವರು ದೀಪ ಪ್ರಜ್ವಲನ ಮಾಡುವುದರ ಮೂಲಕ ಉದ್ಘಾಟಿಸಿ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯಕ್ಕೆ ಕೊಟ್ಟಷ್ಟು ಮಹತ್ವವನ್ನು ಸಹಪಠ್ಯ ಚಟುವಟಿಕೆಗಳಿಗೆ ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ರೂಪಿಸುವುದು ಆಡಳಿತ ಮಂಡಳಿಯ ಆಶಯವಾಗಿದೆ ಈ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ಪ್ರಾರಂಭಿಸುವುದು ಉತ್ತಮ ಬೆಳವಣಿಗೆಯಾಗಿದೆ, ನಮ್ಮ ಸಂಸ್ಕೃತಿ ಸಂಸ್ಕಾರ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಇದು ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಆಸೀನರಾಗಿದ್ದ ಯಕ್ಷಗಾನ ತರಬೇತುದಾರರಾದ ಅರುಣ್ ಕುಮಾರ್ ಧರ್ಮಸ್ಥಳ ಇವರು ಯಕ್ಷಗಾನ ತರಗತಿಗೆ ಸೇರಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸೀನಪ್ಪಗೌಡರವರು ಈ ಯಕ್ಷಗಾನ ತರಬೇತಿಯ ಪ್ರಯೋಜನವನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಏಳನೇ ತರಗತಿಯ ಮಕ್ಕಳಿಂದ ರಚಿತವಾದಂತಹ ಚಂದ್ರಯಾನ ಎನ್ನುವ ವಿಷಯದ ಕುರಿತು ಸುನಾದ ಎನ್ನುವ ಹೆಸರಿನೊಂದಿಗೆ ಶಾಲಾ ಬಿತ್ತಿ ಪತ್ರವನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಸೋಮಶೇಖರ್ ಅವರು ಅನಾವರಣಗೊಳಿಸಿದರು.


ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡಂತಹ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ ಸ್ವಾಗತಿಸಿ, ಶಾಲೆಯ ಶಿಕ್ಷಕ ಪವನ್ ಕುಮಾರ್ ಧನ್ಯವಾದವಿತ್ತರು. ನಿಶಾಂತ್ ಕುಮಾರ್ ರವರು ನಿರೂಪಿಸಿದರು, ಶಾಲೆಯ ಎಲ್ಲ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

Related posts

ಮೇ 29: ಗುರುವಾಯನಕೆರೆಯಲ್ಲಿ ಬಾಲಕೃಷ್ಣ ಶೆಟ್ಟಿ ಮಾಲಕತ್ವದ “ನೇಸರ” ಸ್ಟುಡಿಯೋ & ವೀಡಿಯೋ ಶುಭಾರಂಭ

Suddi Udaya

ಬೆಳಾಲು ಪ್ರಾ.ಕೃ.ಪ.ಸ.ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟನೆ

Suddi Udaya

ಶಿಶಿಲ ಗ್ರಾ.ಪಂ. ನಲ್ಲಿ ಸ್ವಾತಂತ್ರ್ಯೋತ್ಸವ  ಆಚರಣೆ

Suddi Udaya

ಬೆಳ್ತಂಗಡಿ : ದಕ್ಷ ಅಧಿಕಾರಿ,ಅಬಕಾರಿ ನಿರೀಕ್ಷಕರಾದ ಸೌಮ್ಯಲತಾರವರಿಗೆ ಪದೋನ್ನತಿ: ಮಂಗಳೂರು ಉಪವಿಭಾಗದ ಉಪ ಅಧೀಕ್ಷಕರಾಗಿ ವರ್ಗಾವಣೆ

Suddi Udaya

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಟ್ಟಿಗೆ ಬೆಂಕಿ ತಗುಲಿ ಕಂಬಳ ಕೋಣಗಳು ಸಾವು

Suddi Udaya

ಮಿತ್ತಬಾಗಿಲು ಗ್ರಾಮ ಸಭೆ: ಆಶ್ರಯ ಯೋಜನೆಯ ಮನೆ ಮಂಜೂರಾತಿಯಲ್ಲಿ ಪಾರದರ್ಶಕತೆ ಇರಬೇಕೆಂದು ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!