24.4 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುಲ್ಕೇರಿ ಚೈತನ್ಯ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಗ್ರಾ.ಪಂ. ಆಶ್ರಯದಲ್ಲಿ ಆಟಿಡೊಂಜಿ ದಿನ

ಸುಲ್ಕೇರಿ : ಚೈತನ್ಯ ಸಂಜೀವಿನಿ ಮಹಿಳಾ ಒಕ್ಕೂಟ ಸುಲ್ಕೇರಿ ಹಾಗೂ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೇ, ಹೂಗುಚ್ಛ ಸ್ಪರ್ಧೆ, ಸಂಧಿ ಪಾರ್ದನ, ‘ಚೆನ್ನೆಮಣೆ ಸ್ಪರ್ಧೆ ಏರ್ಪಡಿಸಲಾಗಿತ್ತು


ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಾಯತ್ರಿ, ಕಾರ್ಯದರ್ಶಿ ಕೊರಗಪ್ಪ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ, ವಲಯ ಮೇಲ್ವಿಚಾರಕಾರದ ಜಯಾನಂದ, ಸ್ವಸ್ತಿಕ್ ಜೈನ್, ಬ್ಲಾಕ್ ಮೆನೇಜರ್ ನಿತೇಶ್, ಸಿಎ ಬ್ಯಾಂಕ್ ಸದಾನಂದ ಗೌಡ, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಎಮ್.ಬಿ ಕೆ’ ಎಸ್.ಸಿ.ಆರ್.ಪಿ ಪಶುಸಖಿ, ಬಿಸಿ ಸಖಿ, FLCRP ಕೃಷಿ ಉದ್ಯೋಗ ಸಖಿ, ಎಲ್ಲಾ ಸಂಜೀವಿನಿ ಸದಸ್ಯರು ,ಸ್ತ್ರಿಶಕ್ತಿ ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಜೀವಿನಿ ಸದಸ್ಯರು ಆಟಿ ತಿಂಗಳಲ್ಲಿ ತಿನ್ನುವ ತಿನಿಸುಗಳನ್ನು ತರುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎರಡೂವರೆ ವರ್ಷ ಪೂರ್ಣಗೊಳಿಸಿರುವ ನಾರಾಯಣ ಪೂಜಾರಿ ಹಾಗೂ ಯಶೋದ ಬಂಗೇರ ಇವರಿಗೆ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ವಲಯ ಮೇಲ್ವಿಚರಕಾರದ ಜಯನಂದ ಹಾಗೂ ಬ್ಲಾಕ್ ಮೆನೇಜರ್ ನಿತೇಶ್ ರವರನ್ನು ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಬಿಸಿ ಸಖಿ ಚಂದ್ರಿಕಾ ನಿರೂಪಿಸಿ, ಎಮ್.ಬಿ.ಕೆ ವಿನುತಾ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಹೇಮಾಲತ ಧನ್ಯವಾದವಿತ್ತರು.

Related posts

ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದ್ ಹಬ್ಬ ಆಚರಣೆ

Suddi Udaya

ಎ.ಕೃಷ್ಣಪ್ಪ ಪೂಜಾರಿಯವರಿಗೆ ’ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ

Suddi Udaya

ಉಜಿರೆ: ವೈದ್ಯರ ದಿನಾಚರಣೆಯ ಅಂಗವಾಗಿ ಹಿರಿಯ ವೈದ್ಯ ಡಾ.ಕೆ.ಎನ್.ಶೆಣೈರವರಿಗೆ ಸನ್ಮಾನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಎಸ್‌ಡಿಎಂ ಕಾಲೇಜಿನ ಕಲಾಕೇಂದ್ರದ ವಿದ್ಯಾರ್ಥಿ ತಂಡದ ಭೀಷ್ಮಾಸ್ತಮಾನ ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ

Suddi Udaya

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!