ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಅಪಘಾತವಾದ ಅಂಬುಲೆನ್ಸ್‌ನಲ್ಲಿ‌ದ್ದ‌ ಗಾಯಾಳು ಮಹಿಳೆ ಸಾವು

ಬೆಳ್ತಂಗಡಿ; ಎರಡು ದಿನಗಳ ಹಿಂದೆ ವಗ್ಗ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಂಬುಲೆನ್ಸ್‌ ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅದರಲ್ಲಿ ಗಾಯಾಳುವಾಗಿದ್ದ ಅಳದಂಗಡಿ ಸನಿಹದ ಮಹಿಳೆ ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.


ಆ ಮೂಲಕ ಸದ್ರಿ ಅಪಘಾತದಲ್ಲಿ‌ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ. ಮೃತ ಮಹಿಳೆಯನ್ನು ಅಳದಂಗಡಿ ಸನಿಹದ ಬಡಗಕಾರಂದೂರು ಗ್ರಾಮದ ಸುಂಕದಕಟ್ಟೆ ನಿವಾಸಿ ದಿವಂಗತ ಹಸನ್ ಅವರ ಪತ್ನಿ ಮರಿಯಮ್ಮ ( 80 ) ಎಂಬವರೆಂದು ಗುರುತಿಸಲಾಗಿದೆ.

ಶುಕ್ರವಾರ ದಿನ ಮಹಿಳೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾಯನಕೆರೆ ಅಭಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಇಸಿಜಿ ಸಹಿತ ತುರ್ತು‌ಚಿಕಿತ್ಸೆ ನೀಡಿ, ಹೃದಯನಾಳಗಳಲ್ಲಿ ಬ್ಲಾಕ್ ಇರುವುದದಿಂದ ವೈದ್ಯರು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಂತೆಯೇ ಶಬೀರ್ ಅವರ ಆಂಬುಲೆನ್ಸ್‌ ನಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ವಗ್ಗ ಬಳಿ ಅಪಘಾತ ನಡೆದಿತ್ತು. ಈ ವೇಳೆ ಚಾಲಕ ಶಬೀರ್ ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದರು.

ಅಪಘಾತದಿಂದ ಮಹಿಳೆಯ ತಲೆಗೆ ಗಾಯ:
ಹೃದಯದ ತೊಂದರೆ ಇದ್ದ ಮಹಿಳೆಗೆ ಅಪಘಾತದ ವೇಳೆ ತಲೆಗೆ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೂ ಅಲ್ಲದೆ ಆ ವೇಳೆ ಅಂಬುಲೆನ್ಸ್‌ನಲ್ಲಿ ಅವರ ಜೊತೆ ಇದ್ದ ಅವರ ಪುತ್ರ ರಝಾಕ್ ಅವರಿಗೆ ಕೈಯ ಮೂಳೆಮುರಿತಕ್ಕೊಳಗಾಗಿದ್ದು ಅವರು ಚಿಕಿತ್ಸೆಯಲ್ಲಿದ್ದಾರೆ.
ಮೃತರು ಇದ್ದ ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಗುರುವಾಯನಕೆರೆ: 7 ಮಂದಿ ಸಾಧಕರಿಗೆ ‘ಎಕ್ಸೆಲ್ ಅಕ್ಷರ ಗೌರವ ಪುರಸ್ಕಾರ’ ಪ್ರದಾನ

Suddi Udaya

ಮುಂಡಾಜೆ : ಕೂಳೂರು ನಿವಾಸಿ ಪುತ್ತಾಕ‌ ನಿಧನ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಬೆಳ್ತಂಗಡಿ ಲ್ಯಾಂಪ್ಸ್ ವಿವಿದೋದ್ದೇಶ ಸಹಕಾರ ಸಂಘದ ಗೋದಾಮು ಮತ್ತು ಮಾರಾಟ ಮಳಿಗೆಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಮಿತ್ತಬಾಗಿಲು ಪರಾರಿ ಮನೆ ಚಂದ್ರಶೇಖರ ಗೌಡ ನಿಧನ

Suddi Udaya

ಬಳಂಜ ಶಿಕ್ಷಕರ ಸಹಕಾರಿ ಬ್ಯಾಂಕ್‌ನ ನಿವೃತ್ತ ಅಧಿಕಾರಿ ರವೀಂದ್ರ ಶೆಟ್ಟಿ ರವರಿಗೆ “ಚುಟುಕು ಚಿನ್ಮಯಿ” ಗೌರವ ಪ್ರಶಸ್ತಿ

Suddi Udaya
error: Content is protected !!