25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಯೋಜನಾಧಿಕಾರಿ ಡಾ. ಪ್ರಸನ್ನಕುಮಾರ ಐತಾಳ್ ಅಧ್ಯಕ್ಷತೆ ವಹಿಸಿ ಸದ್ಭಾವನಾ ದಿನದ ಮಹತ್ವ ತಿಳಿಸಿದರು. ಹಾಗೆಯೇ ಸದ್ಭಾವನಾ ಪ್ರತಿಜ್ಞೆಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ವಿವಿಧ ಧರ್ಮಗಳಲ್ಲಿ ಸಾಮರಸ್ಯದ ಬಗ್ಗೆ ವಿದ್ಯಾರ್ಥಿಗಳಿಂದ ಗೋಷ್ಠಿ ನಡೆಯಿತು. ಹಿಂದೂ ಧರ್ಮದ ಬಗ್ಗೆ ಆದಿತ್ಯ ಹೆಗಡೆ , ಇಸ್ಲಾಂ ಧರ್ಮದ ಬಗ್ಗೆ ಮುಹಮ್ಮದ್ ಸಲೀಲ್ , ಜೈನ ಧರ್ಮದ ಬಗ್ಗೆ ಚಾರಿತ್ರ್ಯ ಜೈನ್ ಹಾಗೂ ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರೀತಮ್ ಮಿನೇಜಸ್ ಇವರು ಸಾಮರಸ್ಯದ ಬಗ್ಗೆ ಮಾತನಾಡಿದರು.

ರಾ.ಸೇ.ಯೋಜನೆಯ ನಾಯಕಿ ದಕ್ಷಾ ಸ್ವಾಗತಿಸಿ , ಅಕ್ಷತಾ ಎಂ.ಜಿ ವಂದಿಸಿದರು. ಡಯಾನಾ ನಿರೂಪಿಸಿದರು.

Related posts

ಉರುವಾಲು ಸಿಡಿಲು ಬಡಿದು ಹಾನಿಯಾದ ಸೇಸಪ್ಪ ಗೌಡರ ಮನೆಗೆ ಕಣಿಯೂರು ಗ್ರಾ.ಪಂ. ನಿಂದ ಭೇಟಿ, ಪರಿಶೀಲನೆ

Suddi Udaya

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ಅಳದಂಗಡಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ

Suddi Udaya

ಸವಣಾಲು : ಕೋಟಿ ಚೆನ್ನಯ್ಯ ಸೈಬರ್ ಸೆಂಟರ್ ಶುಭಾರಂಭ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಅಯೋಧ್ಯೆ ಯಾತ್ರೆ

Suddi Udaya

ಪಡಂಗಡಿ ಸಹಕಾರ ಸಂಘದಲ್ಲಿ ವಿಶ್ವ ಯೋಗ ದಿನಾಚರಣೆ, ಶಾಸಕ ಹರೀಶ್ ಪೂಂಜ ಭಾಗಿ

Suddi Udaya
error: Content is protected !!