September 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿ

ಸೆ.6: ರೆಖ್ಯದಲ್ಲಿ 24ನೇ ವರ್ಷದ ಮೊಸರು ಕುಡಿಕೆ ಉತ್ಸವ

ರೆಖ್ಯ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ರೆಖ್ಯ, ವಿಶ್ವಹಿಂದೂ ಪರಿಷತ್ ಬಜರಂಗದಳ ರೆಖ್ಯ ಇದರ ನೇತೃತ್ವದಲ್ಲಿ ಶ್ರೀ ಕ್ಷೇ. ಧ.ಗ್ರಾ.ಯೋಜನೆ ರೆಖ್ಯ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ರೆಖ್ಯ, ಶ್ರೀ ಗುಡ್ರಮಲ್ಲೇಶ್ವರ ದೇವಸ್ಥಾನ ರೆಖ್ಯ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೋಲಾರು ರೆಖ್ಯ, ಶ್ರೀ ಅಯ್ಯಪ್ಪ ಭಜನಾ ಮಂದಿರ ರೆಖ್ಯ ಇದರ ಸಹಕಾರದೊಂದಿಗೆ ರೆಖ್ಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಸೆ.6 ರಂದು 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಜರುಗಲಿದೆ. ಬೆಳ್ಳಗಿನಿಂದ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಲಿದೆ. ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಖ್ಯ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ನವೀನ್ ಕೆ. ರೆಖ್ಯ ವಹಿಸಲಿದ್ದಾರೆ.

ಧಾರ್ಮಿಕ ಉಪನ್ಯಾಸವನ್ನು ನೇಲ್ಯಡ್ಕ ಸರಕಾರಿ ಪ್ರೌಢಶಾಲಾ ಶಿಕ್ಷಕ ಅರವಿಂದ ಗೋಖಲೆ ನೀಡಲಿದ್ದು, ವಿವಿಧ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಮಹಾಬಲ ಕೆ. ಮುದ್ದಿಗೆ, ಹತ್ಯಡ್ಕ ಪ್ರಾ.ಕೃ.ಪ.ಸ ಸಂಘದ ನಿವೃತ್ತ ಸಿಇಒ ತ್ಯಾಂಪಣ್ಣ ಶೆಟ್ಟಿಗಾರ್‌ರವರನ್ನು ಸನ್ಮಾನಿಸಲಾಗುವುದು.

Related posts

ನೆರಿಯ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿ ಜೋನ್ಸಾನ್ ಗೆ ನ್ಯಾಯಾಂಗ ಬಂಧನ

Suddi Udaya

ಮಡಂತ್ಯಾರು ಸೊಸೈಟಿಯಿಂದ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾ ಅವರ ನೇತೃತ್ವದಲ್ಲಿ ಕಚ್ಚಾರಸ್ತೆಗಳ ದುರಸ್ತಿ: ಸಹಕಾರಿಯಿಂದ ಸಮೃದ್ಧಿ ಆಶಯದೊಂದಿಗೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಜ್ಜೆ

Suddi Udaya

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ; ಬೆಳ್ತಂಗಡಿ ಮಂಡಲದ ವತಿಯಿಂದ ವಿಜಯೋತ್ಸವ: ಸಂಸದ ಕ್ಯಾ| ಬ್ರಿಜೇಶ್ ಚೌಟ ಭಾಗಿ

Suddi Udaya

ಬೈಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶೇಷ ತರಗತಿ ಉದ್ಘಾಟನೆ

Suddi Udaya

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜು ಸತತ 12 ನೇ ಬಾರಿಗೆ ಶೇ. 100 ಫಲಿತಾಂಶ

Suddi Udaya

ಕುಂಟಿನಿ ದ.ಕ ಜಿ.ಪಂ.ಕಿ.ಪ್ರಾ ಶಾಲೆಯಲ್ಲಿ ಸ್ವಚ್ಛತೆ ಕಾರ್ಯಕ್ರಮ ಮತ್ತು ಶಾಲಾ ಕೈತೋಟ ರಚನೆ

Suddi Udaya
error: Content is protected !!