ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಕ್ಕಡ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳ ಕ್ರೀಡಾಕೂಟ ಅ.01 ರಂದು ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕರಾದ ರಾಜಗುರು ಹೆಬ್ಬಾರ್ ಅವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಲಕ್ಷ್ಮಣ ಗೌಡ ವಹಿಸಿದ್ದರು. ಪ್ರೌಢಶಾಲಾ ನೋಡಲ್ ಶಿಕ್ಷಕರಾದ ವಿಜಯಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಥಮಿಕ ಶಾಲೆಯ ನೋಡಲ್ ಶಿಕ್ಷಕರಾದ ಶ್ರೀಧರ್ , ಸಿ. ಆರ್.ಪಿ
ವಿಲ್ ಫ್ರೆಡ್, ಹಿರಿಯರಾದ ವೀರೇಶ್ವರ ಹೆಬ್ಬಾರ್ ಉಪಸ್ಥಿತರಿದ್ದರು.

ಪ್ರಧಾನ ಮುಖ್ಯ ಶಿಕ್ಷಕರಾದ ಶರತ್ ಕುಮಾರ್ ಸ್ವಾಗತಿಸಿದರು. ಶೋಲಿ ವಿ ಜೆ ನಿರೂಪಿಸಿದರು. ವಲಯದ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಕೂಟವನ್ನು ಉತ್ತಮವಾಗಿ ನಡೆಸಿಕೊಟ್ಟರು.
ತಂಡದ ಮೇಲ್ವಿಚಾರಕರಾಗಿ ವಲಯದ ಶಾಲೆಗಳ ಸಹ ಶಿಕ್ಷಕರು, ವಲಯದ ಎಲ್ಲ ಶಾಲೆಗಳ ಕ್ರೀಡಾಪಟುಗಳು ಭಾಗವಹಿಸಿದರು. ಶಾಲಾ ಎಸ್ ಡಿ ಎಂ ಸಿಯ ಸದಸ್ಯರು ಮತ್ತು ಪೋಷಕರು, ಶಾಲಾ ಶಿಕ್ಷಕರು, ಸಿಬ್ಬಂದಿಗಳು ವಿದ್ಯಾರ್ಥಿಗಳು ಮತ್ತು ಊರವರ ಸಹಕಾರದಿಂದ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಿತು.













