26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸರಕಾರಿ ಪ.ಪೂ. ಕಾಲೇಜು ಬೆಳ್ತಂಗಡಿಯ ರಾಜ್ಯ ಪ್ರಶಸ್ತಿ ಪಡೆದ ಪ್ರಾಂಶುಪಾಲರಾದ ಸುಕುಮಾರ್ ರವರಿಗೆ ಅಭಿನಂದನೆ: ವಗಾ೯ವಣೆಗೊಂಡ ಉಪನ್ಯಾಸಕ ಗಣಪತಿ ಭಟ್ ರವರಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ, ಸುವರ್ಣ ಸಂಭ್ರಮ -2023 ಇದರ ವತಿಯಿಂದ
ರಾಜ್ಯ ಪ್ರಶಸ್ತಿ ಪಡೆದ ಪ್ರಾಂಶುಪಾಲರಾದ ಸುಕುಮಾರ ಇವರಿಗೆ ಅಭಿನಂದನೆ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಬೈಂದೂರನ ಉಪ್ಪುಂದಕ್ಕೆ ವಗಾ೯ವಣೆಗೊಂಡ ಗಣಪತಿ ಭಟ್ ಇವರಿಗೆ ಬೀಳ್ಕೊಡುಗೆ ಸಮಾರಂಭ ಸೆ.9ರಂದು ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರುಗಿತು.


ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ಧನಂಜಯ್ ರಾವ್ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಯಾನಂದ ಗೌಡ ಭಾಗವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜಿನ ಹಳೇ ವಿದ್ಯಾರ್ಥಿ ಪ್ರಮೋದ್ ಆರ್ .ನಾಯಕ್, ನ.ಪಂ ಮಾಜಿ ಸದಸ್ಯ ಸಂತೋಷ್ ಕುಮಾರ್ ಜೈನ್, ಗಣಪತಿ ಭಟ್ ರವರ ಪತ್ನಿ ನಾಗರತ್ನ ಉಪಸ್ಥಿತರಿದ್ದರು. ಉಪನ್ಯಾಸಕ ಶೀನಾ ನಾಡೋಳಿ ಸ್ವಾಗತಿಸಿದರು. ಉಪನ್ಯಾಸಕಿ ಹೇಮಾವತಿ ಕಾಯ೯ಕ್ರಮ ನಿರೂಪಿಸಿದರು.

ಹಿರಿಯ ಉಪನ್ಯಾಸಕ ಆನಂದ ಡಿ. ಅಭಿನಂದನಾ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ರಂಜಿತಾ,ಪ್ರಜ್ಞಾ, ಉಪನ್ಯಾಸಕ ತಾರಾನಾಥ್ ಗಣಪತಿ ಭಟ್ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸುವರ್ಣ ಕುಮಾರಿ ಮತ್ತು ಮಂಗಳ ಇವರು ಸನ್ಮಾನ ಪತ್ರ ವಾಚಿಸಿದರು.‌ ಉಪನ್ಯಾಸಕ ಮೋಹನ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಸುವರ್ಣ ಮಹೋತ್ಸವ ಸಮಿತಿ ಪದಾಧಿಕಾರಿಗಳು , ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವೃಂದದವರು ಭಾಗವಹಿಸಿದ್ದರು.

Related posts

ಬೆಳ್ತಂಗಡಿ: ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಆಹಾರ ಇಲಾಖೆಯಿಂದ ಸೂಚನೆ

Suddi Udaya

ಅರಸಿನಮಕ್ಕಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಜಯಪ್ರಸಾದ್ ಶೆಟ್ಟಿಗಾರ್ ಆಯ್ಕೆ

Suddi Udaya

ಶ್ರೀ. ಕ್ಷೆ. ಧ. ಗ್ರಾ ಯೋಜನೆಯ ಬಜಿರೆ ಒಕ್ಕೂಟದ ಪದಗ್ರಹಣ ಹಾಗೂ 19ನೇ ವರ್ಷದ ಶನೇಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅತ್ಯುತ್ತಮ ಸಾಧನೆ-ಪ್ರಸಕ್ತ ಸಾಲಿನಲ್ಲಿ ರೂ 326 ಕೋಟಿ ಠೇವಣಿ,ರೂ.269 ಕೋಟಿ ಸಾಲ,ರೂ.70 ಕೋಟಿ ಹೂಡಿಕೆ,ರೂ.5.85 ಕೋಟಿ ಲಾಭ

Suddi Udaya

ಇಳಂತಿಲ ಗ್ರಾ.ಪಂ. ಸದಸ್ಯೆ ರೇಖಾ ನಿಧನ

Suddi Udaya

ಹೊಸಂಗಡಿ: ಕಾರು ಡಿಕ್ಕಿ-ಬಾಲಕ ಸ್ಥಳದಲ್ಲೇ ಮೃತ್ಯು

Suddi Udaya
error: Content is protected !!