September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೋಲಿ ರಿಡೀಮರ್ ಶಾಲಾ ಅಂಗಳದಲ್ಲಿ ಕೆಂಪು ಕಲರವ

ಹೋಲಿ ರಿಡೀಮರ್ ಶಾಲಾ ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿ ಮಕ್ಕಳಿಗೆ ಬಣ್ಣಗಳನ್ನು ಪರಿಚಯಿಸಲು ಮತ್ತು ಮಕ್ಕಳನ್ನು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವ ಉದ್ದೇಶದಿಂದ ಸೆಪ್ಟೆಂಬರ್ 13ರಂದು ‘ರೆಡ್ ಡೇ ‘ ದಿನವಾಗಿ ಆಚರಿಸಲಾಯಿತು. ಪುಟಾಣಿ ಮಕ್ಕಳು ಕೆಂಪು ಬಣ್ಣದ ಬಟ್ಟೆ, ಆಭರಣಗಳನ್ನು ತೊಟ್ಟು ಆಕರ್ಷಕವಾಗಿ ಕೆಂಪು ಗುಲಾಬಿಗಳಂತೆ ಮಿನುಗುತ್ತಿದ್ದರು.


ಹಾಗೆಯೇ ಕೆಂಪು ಬಣ್ಣದ ಆಟಿಕೆಗಳು, ಹೂಗಳು, ತರಕಾರಿಗಳು, ಹಣ್ಣುಗಳನ್ನು ಗುರುತಿಸಿ, ಜೋಡಿಸಿ ಸಂತಸಪಟ್ಟರು. ವಿದ್ಯಾರ್ಥಿಗಳಿಗೆ ಅಭಿನಯಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಕೆಂಪು ಬಣ್ಣದ ವಿಶೇಷತೆಯನ್ನು ತಿಳಿಸಿ ಶುಭ ಹಾರೈಸಿದರು. ಸಹಶಿಕ್ಷಕಿಯರಾದ ಶ್ರೀಮತಿ ಶಾಂತಿ ಪಿರೇರಾ, ಶ್ರೀಮತಿ ಅಖೀದಾ ಬಾನು ಹಾಗೂ ಶ್ರೀಮತಿ ಸಂಧ್ಯಾ ಸಹಕರಿಸಿದರು.

Related posts

ಧರ್ಮಸ್ಥಳ: ಹೂತ ಮೃತದೇಹಗಳ ಅವಶೇಷ ಹೊರತೆಗೆಯುವ ಕಾರ್ಯ ಪ್ರಾರಂಭ :ಬಿಗಿ ಪೊಲೀಸ್ ಬಂದೋಬಸ್ತ್

Suddi Udaya

ತಣ್ಣೀರುಪಂತ: 7ನೇ ತರಗತಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

Suddi Udaya

ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್: ಉಜಿರೆಯ ಹಿಮಾನ್ಸ್ ಕುಮಿಟೆಯಲ್ಲಿ ದ್ವಿತೀಯ ಹಾಗೂ ಕಟಾದಲ್ಲಿ ಪ್ರಥಮ ಸ್ಥಾನ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಯವರ ಹುಟ್ಟು ಹಬ್ಬದ ಪ್ರಯುಕ್ತ ವಾಲ್ಮೀಕಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Suddi Udaya

ಉಯ್ಯಾಲೆಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಸಾವು

Suddi Udaya
error: Content is protected !!