29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ದ.ಕ ಜಿಲ್ಲಾ ನಾಯಕರ ಉಪಸ್ಥಿತಿಯಲ್ಲಿ ಎಸ್‌ಡಿಪಿಐ ಕುವೆಟ್ಟು ಬ್ಲಾಕ್ ಸಮಾಗಮ

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಕೈಗೊಂಡ ಅಭಿಯಾನವಾದ ಬ್ಲಾಕ್ ಸಮಾಗಮದ ಅಂಗವಾಗಿ ಎಸ್‌ಡಿಪಿಐ ಜಿಲ್ಲಾ ನಿಯೋಗದ ತಂಡ ಕುವೆಟ್ಟು ಬ್ಲಾಕ್ ಸಮಿತಿ ಹಾಗೂ ಬೂತ್ ಸಮಿತಿಗಳ ಪದಾಧಿಕಾರಿಗಳನ್ನು ಸೆ.15 ರಂದು ಭೇಟಿಯಾಗಿ ಮುಕ್ತ ಚರ್ಚೆಯನ್ನು ನಡೆಸಿದರು.


ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿಗಳಾದ ಅಲ್ಫೋನ್ಸ್ ಫ್ರಾಂಕೋ, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಆಗಮಿಸಿದ್ದರು.
ರಾಷ್ಟ್ರೀಯ ಕಾರ್ಯದರ್ಶಿಗಳಾದ ಅಲ್ಫೋನ್ಸ್ ಫ್ರಾಂಕೋ ಪಕ್ಷದ ಕಾರ್ಯ ಚಟುವಟಿಕೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿ ಮಾತನಾಡಿ, ಎಲ್ಲಾ ಪದಾಧಿಕಾರಿಗಳು, ನಾಯಕರು ಪಕ್ಷದ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸಿ ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಕರೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಅವರು ಸಮಾರೋಪ ಭಾಷಣ ಮಾಡಿದರು.


ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಅವರು ಪಕ್ಷದ ಮುಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಕಟ್ಟೆ, ಕಾರ್ಯದರ್ಶಿಗಳಾದ ಅಶ್ಫಾಕ್ ಪುಂಜಾಲಕಟ್ಟೆ, ನಿಸಾರ್ ಕುದ್ರಡ್ಕ, ಕ್ಷೇತ್ರ ಸಮಿತಿ ಪದಾಧಿಕಾರಿಗಳು, ಕುವೆಟ್ಟು ಬ್ಲಾಕ್ ಸಮಿತಿ ಪದಾಧಿಕಾರಿಗಳು, ಗ್ರಾಮ ಸಮಿತಿ ಪದಾಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಕುವೆಟ್ಟು ಬ್ಲಾಕ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ರೌಫ್ ಪುಂಜಾಲಕಟ್ಟೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಆಸೀಫ್ ಬಂಗೇರುಕಟ್ಟೆ ಧನ್ಯವಾದಗೈದರು.

Related posts

ಶಿಬಾಜೆ ಸುರಕ್ಷಿತಾರಣ್ಯದ ಪಡಂತಾಜೆ ರಸ್ತೆ ಬದಿ 6 ತಿಂಗಳ ಪ್ರಾಯದ ಚಿರತೆ ಮರಿಯ ಶವ ಪತ್ತೆ

Suddi Udaya

ಸಶಸ್ತ್ರ ಸೀಮಾ ಬಲ ಕೇಂದ್ರ ಪೋಲಿಸ್ ಹುದ್ದೆಗೆ ಆಯ್ಕೆಯಾದ ಗುರಿಪಳ್ಳದ ಅರ್ಚನಾ ಗೌಡ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವದ ಪ್ರಯುಕ್ತ ಚಿತ್ತಾರ – ಚಿಣ್ಣರ ಚಿತ್ರೋತ್ಸವ’ ಚಿತ್ರಕಲೆ ಸ್ಪರ್ಧೆ:

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೂನಿಯರ್ ಜೆಸಿ ಸಪ್ತಾಹ ಸಂಪನ್ನ

Suddi Udaya

ಕಾಪಿನಡ್ಕ ಶಾಲೆಯಲ್ಲಿ ಬುಲ್ ಬುಲ್ ದಳ ಉದ್ಘಾಟನೆ

Suddi Udaya

ಕುಂಟಾಲಪಲ್ಕೆ‌ ಶಾಲೆಗೆ ನೂತನ ಧ್ವಜಸ್ತಂಭ ಕೊಡುಗೆ

Suddi Udaya
error: Content is protected !!