March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ದಶಲಕ್ಷಣ ಪರ್ವ ಉದ್ಘಾಟನಾ ಸಮಾರಂಭ: ಮಹಾಮಸ್ತಕಾಭಿಷೇಕದೊಂದಿಗೆ ಜನಮಂಗಳ ಕಾರ್ಯಕ್ರಮ : ಡಾ. ಪದ್ಮಪ್ರಸಾದ ಅಜಿಲ

ವೇಣೂರು: ವೇಣೂರಿನಲ್ಲಿ 2024 ಫೆಬ್ರವರಿ 22 ರಿಂದ ಮಾರ್ಚ್ ಒಂದರ ವರೆಗೆ ನಡೆಯುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮೊದಲಾದ ಜನಮಂಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಹೇಳಿದರು.

ಅವರು ಸೆ.20 ರಂದು ವೇಣೂರಿನಲ್ಲಿ ಯಾತ್ರಿನಿವಾಸದಲ್ಲಿ ದಶಲಕ್ಷಣ ಪರ್ವ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೈನಧರ್ಮದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ, ವಿಶ್ವಾಸವಿದ್ದು, ಅವುಗಳನ್ನು ತಿಳಿದು ಕೊಂಡು ನಮ್ಮ ದೈನಂದಿನ ಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಜೀವನ ಪಾವನವಾಗುತ್ತದೆ. ಸಕಲ ಪಾಪಕರ್ಮಗಳ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗುತ್ತಾನೆ ಎಂದು ಅವರು ಹೇಳಿದರು.

ಮಸ್ತಕಾಭಿಷೇಕ ಸಂದರ್ಭದಲ್ಲಿ ಎಲ್ಲರೂ ಕ್ಷಮಾ ಧರ್ಮದ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಕೊಡುಗೆಯಾಗಿ ನೀಡಿದ ಕೃತಕ ಕಾಲನ್ನು ಮಂಗಳೂರು ಬೊಂದೇಲ್‌ನ ಪಾರ್ವತಿ ಅವರಿಗೆ ನೀಡಲಾಯಿತು.

ಉತ್ತಮ ಕ್ಷಮಾ ಧರ್ಮದ ಬಗ್ಗೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕಿ ಬೆಳ್ತಂಗಡಿಯ ಪ್ರೊ. ತ್ರಿಶಲಾ ಯು. ಮಲ್ಲ, ನಾವು ಮನೆಯಲ್ಲಿಯೂ, ಸಮಾಜದಲ್ಲಿಯೂ ಮನ, ವಚನ, ಕಾಯದಿಂದ ಶಾಂತಿ, ಸಮಾಧಾನದಿಂದ ವರ್ತಿಸಿದರೆ ನಮಗೂ, ಇತರರಿಗೂ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ವಸ್ತುವಿನ ಸಹಜ ಗುಣವೇ ಧರ್ಮ ಆಗಿದ್ದು ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ, ಬ್ರಹ್ಮಚರ್ಯ, ಮೊದಲಾದ ದಶಧರ್ಮಗಳು ನಮ್ಮ ಆತ್ಮನ ಸಹಜ ಗುಣಗಳಾಗಿವೆ. ಎಲ್ಲವೂ ಶ್ರೇಷ್ಠವಾದುದರಿಂದ ಉತ್ತಮ ಎಂಬ ವಿಶೇಷಣ ಬಳಸುತ್ತೇವೆ. ಮನ, ವಚನ, ಕಾಯದದಿಂದ ಕ್ರೋಧವನ್ನು ನಿಯಂತ್ರಿಸಿ ಕ್ಷಮಾ ಗುಣ ಬೆಳೆಸಿಕೊಳ್ಳಬಹುದು. ಕ್ರೋಧ ಅಳಿಸಿ, ಕ್ಷಮಾ ಗುಣವನ್ನು ಉಳಿಸಿ, ಬೆಳೆಸಬೇಕು. ಕ್ಷಮಾ ಗುಣ ವೀರರ ಲಕ್ಷಣವಾಗಿದೆ. ಬಾಹುಬಲಿ ಸಾಧಿಸಿ ತೋರಿಸಿದ ಅಹಿಂಸೆಯಿಂ ದ ಸುಖ, ತ್ಯಾಗದಿಂದ ಶಾಂತಿ ಎಂಬ ಜೀವನಮೌಲ್ಯ ಸಾರ್ವಕಾಲಿಕ ಮಾನ್ಯತೆಯನ್ನು ಹೊಂದಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಎಂಜಿನಿಯರ್ ಶಿವಪ್ರಸಾದ ಅಜಿಲ ಉಪಸ್ಥಿತರಿದ್ದರು. ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ ಕುಮಾರ್ ಇಂದ್ರ ಸ್ವಾಗತಿಸಿದರು.

ಅಳದಂಗಡಿ ಮಿತ್ರಸೇನ ಜೈನ್ ಶಾಂತಿಮಂತ್ರ ಪಠಣ ಮಾಡಿದರು.

ಕಾರ್ಯಕ್ರಮ ನಿರ್ವಹಿಸಿದ ಮಹಾವೀರ ಜೈನ್ ಮೂಡುಕೋಡಿಗುತ್ತು ಧನ್ಯವಾದವಿತ್ತರು.

Related posts

ಪಡಂಗಡಿ ಶಾಲೆಯ ಪಕ್ಕದಲ್ಲಿರುವ ಮರಕ್ಕೆ ಸಿಡಿಲು ಬಡಿತ,

Suddi Udaya

ಉಜಿರೆ ಟಿಬಿ. ಕ್ರಾಸ್ ಬಳಿ ಕಾರು ಪಲ್ಟಿ: ಚಾಲಕ ಪ್ರಾಣಪಾಯದಿಂದ ಪಾರು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಪಾಡಿಯ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಸಮಾರೋಪ ಕಾರ್ಯಕ್ರಮ

Suddi Udaya

ತೋಟತ್ತಾಡಿ ಚರ್ಚ್ ನಲ್ಲಿ ಯುವಕರಿಂದ ತಯಾರಿಸಲ್ಪಟ್ಟ ೨೨ ಅಡಿ ಎತ್ತರದ ಕ್ರಿಸ್‌ಮಸ್ ನಕ್ಷತ್ರ

Suddi Udaya

ನಾರಾವಿ:”ಸನ್ನಿಧಿ” ಪ್ಯಾಲೇಸ್ ಡೊಂಕುಬೆಟ್ಟು ವೀರಮ್ಮ ಸಂಜೀವ ಸಾಲಿಯನ್ ಮತ್ತು ಮಕ್ಕಳಿಂದ ದೈಪಾಲಬೆಟ್ಟು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಮುಖಾಯಾಮ ಮಂಟಪ ದುರಸ್ತಿಗೆ ಮರಮಟ್ಟು ಹಾಗೂ ಭಂಡಾರಕ್ಕೆ ಪಲ್ಲಕ್ಕಿ ಸಮರ್ಪಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳ ಸಮುದಾಯದ ಅಭಿವೃದ್ಧಿ ವಿಭಾಗ ಆಶ್ರಯದಲ್ಲಿ 418 ಶಾಲೆಗಳಿಗೆ ರೂ.2.50 ಕೋಟಿ ಮೊತ್ತದ 3472 ಜೊತೆ ಪೀಠೋಪಕರಣ ವಿತರಣೆಗೆ ಡಾ.ಹೆಗ್ಗಡೆ ಚಾಲನೆ

Suddi Udaya
error: Content is protected !!