ಉಜಿರೆ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇವರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಶೂ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಸೆ.24 ರಂದು ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಬ್ಯಾಂಕ್ ಆಫ್ ಬರೋಡ ವಿಭಾಗೀಯ ಮುಖ್ಯಸ್ಥರು ಮತ್ತು ಜನರಲ್ ಮ್ಯಾನೇಜರ್ ಗಾಯತ್ರಿ ಆರ್ ನೇರವೇರಿಸಿ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜರ್ನಾದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡ್ಡೆಟ್ನಾಯ ವಹಿಸಿದ್ದರು.
ವೇದಿಕೆಯಲ್ಲಿ ಬೆಳ್ತಂಗಡಿ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಧನರಾಜ್,ಎಸ್.ಡಿ.ಎಂ ಸೊಸೈಟಿ ಐಟಿ ಮತ್ತು ಹಾಸ್ಟೆಲ್ ಗಳ ಸಿಇಓ ಪೂರಣ್ ವರ್ಮ, ನ್ಯಾಯವಾದಿ ಬಿ.ಕೆ ಧನಂಜಯ್ ರಾವ್, ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾಕಿರಣ್, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಕೆ. ಮೋಹನ್ ಕುಮಾರ್,ಬಿ.ರಾಜೇಶ್ ಪೈ ಉಪಸ್ಥಿತರಿದ್ದರು.ಸುಮಾರು 161 ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು.
ವಿಜಯ್ ಅತ್ತಾಜೆ ನಿರೂಪಿಸಿದರು.ಶ್ರೀಧರ್ ಕೆ.ವಿ ವಂದಿಸಿದರು.ಎಸ್ ಡಿ ಎಮ್ ಕಾಲೇಜ್ ಕ್ರೀಡಾ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು.ದೈಹಿಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಾರದಾ,ರಮೇಶ್, ಕೃಷ್ಣಾನಂದ, ಸುದೀನ್ ಪೂಜಾರಿ, ನಿತಿನ್, ಸಂದೇಶ್ ಪೂಂಜ,ಸುಭಾಶ್, ಪ್ರಶಾಂತ್, ಸಂದೀಪ್ ಶೆಟ್ಟಿ,ಪ್ರವೀಣ್, ಸುಭಾಶ್ಚಂದ್ರ,ಅಜಿತ್, ಗೋಪಾಲ್, ಪಂಚಾಕ್ಷರಪ್ಪ, ಸಂತೋಷ್ ದೈಹಿಕ ಶಿಕ್ಷಕರನ್ನು ಗೌರವಿಸಲಾಯಿತು.