ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮುಳಿಯ ಜ್ಯುವೆಲ್ಸ್‌ನ ಡೈಮಂಡ್ ಫೆಸ್ಟ್‌ಗೆ ಗ್ರಾಹಕರಿಂದ ವ್ಯಾಪಕ ಬೆಂಬಲ; ಮನಮೆಚ್ಚಿದ ವಜ್ರಾಭರಣಗಳ ಖರೀದಿಗೆ ಸಾಲುಗಟ್ಟಿದ ಗ್ರಾಹಕರು

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ನಡೆಯುತ್ತಿರುವ ವಜ್ರಾಭರಣಗಳ ಪ್ರದರ್ಶನ-ಮಾರಾಟ ಮೇಳ ‘ಡೈಮಂಡ್ ಫೆಸ್ಟ್’ಗೆ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆಗಳು ದೊರೆತಿವೆ. ಸೆಪ್ಟೆಂಬರ್ ೧೮ರಂದು ಪ್ರಾರಂಭವಾದ ಡೈಮಂಡ್ ಫೆಸ್ಟ್‌ಗೆ ಈಗಾಗಲೇ ಭಾರೀ ಸಂಖ್ಯೆಯ ಗ್ರಾಹಕರು ಆಗಮಿಸಿದ್ದು, ತಮ್ಮ ಆಯ್ಕೆಯ ವಜ್ರಾಭರಣಗಳನ್ನು ಖರೀದಿಸಿ ಸಂತಸಪಟ್ಟಿದ್ದಾರೆ.
ಡೈಮಂಡ್ ಫೆಸ್ಟ್ ಆರಂಭವಾದ ದಿನದಿಂದಲೇ ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಮಳಿಗೆಗೆ ಭೇಟಿ ನೀಡಿ, ತಮಗಿಷ್ಟವಾದ ವಜ್ರಾಭರಣಗಳನ್ನು ಖರೀದಿಸುತ್ತಿದ್ದಾರೆ. ಗ್ರಾಹಕರ ಬೇಡಿಕೆಯ ಮೇರೆಗೆ ಡೈಮಂಡ್ ಫೆಸ್ಟ್ ಇನ್ನಷ್ಟು ದಿನಗಳ ಕಾಲ ವಿಸ್ತರಣೆಯಾಗುವ ನಿರೀಕ್ಷೆಯಿದೆ.
ಕೈಗೆಟುಕುವ ದರದಲ್ಲಿ ಮಹಿಳೆಯರ ಮನಮೆಚ್ಚುವ ವಜ್ರದ ಆಭರಣಗಳ ಖರೀದಿಗೆ ಮುಳಿಯ ಸಂಸ್ಥೆ ಅವಕಾಶ ಒದಗಿಸಿದೆ. ಆಕರ್ಷಕ ದರದಲ್ಲಿ ವಜ್ರದ ಆಭರಣಗಳನ್ನು ಖರೀದಿಸಬಹುದಾಗಿದೆ. ವೇದಾಂತ್ ಮತ್ತು ಕಿಸ್ನ ಎಂಬ ಎರಡು ಶ್ರೇಣಿಯ ಆಭರಣಗಳು ಡೈಮಂಡ್ ಫೆಸ್ಟ್‌ನಲ್ಲಿ ಲಭ್ಯವಿವೆ.

ವಜ್ರದ ಉಂಗುರ ಗೆಲ್ಲುವ ಅವಕಾಶ:
ಡೈಮಂಡ್ ಫೆಸ್ಟ್ ಮಾರಾಟ ಮತ್ತು ಪ್ರದರ್ಶನದಲ್ಲಿ ವಜ್ರಾಭರಣಗಳ ಅಮೋಘ ಸಂಗ್ರಹವಿದೆ. ವೇದಾಂತ್ ಎನ್ನುವ ವಜ್ರದ ಆಭರಣಗಳು, ಅಮೂಲ್ಯ ಡೈಮಂಡ್ ಹಾಗೂ ಕಿಸ್ನ ಡೈಮಂಡ್‌ಗಳು ಲಭ್ಯವಿದೆ. ಉಂಗುರಗಳು, ನೆಕ್ಲೇಸ್‌ಗಳು, ಕಿವಿಯೋಲೆಗಳನ್ನು ಅತ್ಯಲ್ಪ ಗ್ರಾಹಕ ಸ್ನೇಹಿ ದರದಲ್ಲಿ ಪಡೆದುಕೊಳ್ಳಬಹುದು. ಖರೀದಿಯಲ್ಲಿ ವಜ್ರದ ಉಂಗುರ ಗೆಲ್ಲುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ನಿಮ್ಮ ಹಳೆಯ ಚಿನ್ನಾಭರಣಗಳನ್ನು ಹೊಸ ವಜ್ರಾಭರಣಗಳೊಂದಿಗೆ ವಿನಿಮಯ ಮಾಡಿ100 ರೂ. ಅಧಿಕ ಪಡೆಯಬಹುದಾಗಿದೆ.

ಕೈಗೆಟಕುವ ವೈಭವ:
ಮುಳಿಯ ಜುವೆಲ್ಸ್‌ನಲ್ಲಿ ವಜ್ರಾಭರಣಗಳ ಕೈಗೆಟಕುವ ದರದಲ್ಲಿ ದೊರೆಯುತ್ತದೆ. 3700 ರಿಂದ 15 ಲಕ್ಷದವರೆಗಿನ ಆಭರಣಗಳು ಲಭ್ಯವಿದೆ. ಇದರಲ್ಲಿ ಉಂಗುರಗಳು 47೦೦/-, ನೆಕ್ಲೇಸ್‌ಗಳು 48400/-, ಪೆಂಡೆಂಟ್‌ಗಳು 3700/-, ಕಿವಿಯೋಲೆ 5300/-, ಬಳೆಗಳು 28500/- ರಿಂದ ಪ್ರಾರಂಭವಾಗಲಿದೆ.

Related posts

ಮಚ್ಚಿನ ಗ್ರಾ.ಪಂ.ನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭಾವಿಗಳಿಗೆ ನೋಂದಾವಣೆ ಪತ್ರ ವಿತರಣೆ

Suddi Udaya

ಮಾ.8: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ, ತುಂಗಪ್ಪ ಬಂಗೇರ ನೇತೃತ್ವದಲ್ಲಿ 18ನೇ ವರ್ಷದ ಸಾಮೂಹಿಕ ವಿವಾಹ

Suddi Udaya

ಯೋಗಾಸನ ಸ್ಪರ್ಧೆ: ವಾಣಿ ಕಾಲೇಜಿನ ವಿದ್ಯಾರ್ಥಿ ಮೋಹಿತ್ ಏಷ್ಯನ್ ಗೇಮ್ಸ್ ಗೆ ಆಯ್ಕೆ

Suddi Udaya

ತೋಟತ್ತಾಡಿ: ಗೋಳಿತ್ತಡಿ ನಿವಾಸಿ ಬಾಬು ಗೌಡ ನಿಧನ

Suddi Udaya

ಧರ್ಮಸ್ಥಳ ಗ್ರಾ.ಯೋ. ವತಿಯಿಂದ ನಾಗಶ್ರೀ ‘ಎ’ ಸ್ವ-ಸಹಾಯ ಸಂಘದ ಸದಸ್ಯೆ ಡೊಂಬಕ್ಕರವರಿಗೆ ವೀಲ್ ಚೇರ್ ಹಾಗೂ ಸಹಾಯಧನ ವಿತರಣೆ

Suddi Udaya

ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಜಂಟಿ ಸಂಘಟನೆ ವತಿಯಿಂದ ‘ಆಟಿದ ಅಟಿಲ್’ ಕಾರ್ಯಕ್ರಮ

Suddi Udaya
error: Content is protected !!