March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ದೊಂಡೊಲೆಯ ವಿಕಲಚೇತನ ಕುಟುಂಬಕ್ಕೆ ಸಹಾಯಹಸ್ತ : ಅರ್ಹರ ಸೇವೆಗೆ ಬೆಳ್ತಂಗಡಿ ಲಯನ್ಸ್ ತೆರೆದುಕೊಂಡಿದೆ-ವಲಯಾಧ್ಯಕ್ಷ ದಿನೇಶ್

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಯು ಅರ್ಹರನ್ನು ಹುಡುಕಿ ಸೇವೆ ಮಾಡುವುದರಲ್ಲಿ ಮುಕ್ತ ಮನಸ್ಸಿನಿಂದ ತೆರೆದುಕೊಂಡಿದೆ ಎಂದು ವಲಯಾಧ್ಯಕ್ಷ ದಿನೇಶ್ ಎಂ.ಕೆ ಮೂಡುಬಿದಿರೆ ಮೆಚ್ಚುಗೆಯ ಮಾತನ್ನಾಡಿದರು‌.
ಪ್ರಾಂತ್ಯ-12 ರಲ್ಲಿ ಬರುವ ಬೆಳ್ತಂಗಡಿ ಘಟಕಕ್ಜೆ ಅಧಿಕೃತ ಭೇಟಿ ಮಾಡಿದ ಅವರು ಸೇವಾ ಕಾರ್ಯ ನಡೆಸಿಕೊಟ್ಟರು.
ವಿಶೇಷವಾಗಿ ಧರ್ಮಸ್ಥಳ ಗ್ರಾಮದ ದೊಂಡೊಲೆ ಎಂಬಲ್ಲಿ ಅತಂತ್ರ ಸ್ಥಿತಿಯಲ್ಲಿ ದಯನೀಯವಾಗಿ ಬದುಕು ಸಾಗಿಸುತ್ತಿರುವ ವಿಕಲ ಚೇತನರಿರುವ ಕುಟುಂಬಕ್ಕೆ ಆರ್ಥಿಕ ಸಹಕಾರ ಹಾಗೂ ಕುಟುಂಬದ ವಿದ್ಯಾರ್ಥಿಗೆ ಶೈಕ್ಷಣಿಕ ರಕ್ಷೆ ಹಸ್ತಾಂತರಿಸಿದರು.


ಬೆಳ್ತಂಗಡಿ ಲಯನ್ಸ್ ಘಟಕದ ಸುವರ್ಣ ಮಹೋತ್ಸವ ಅಧ್ಯಕ್ಷ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮೂಡುಬಿದಿರೆ, ವೇಣೂರು, ಸುಲ್ಕೇರಿ ಮತ್ತು ಬೆಳ್ತಂಗಡಿಯ ಅಧ್ಯಕ್ಷರುಗಳು, ನಿಕಟಪೂರ್ವ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.


ಕೃಷ್ಣ ಆಚಾರ್ ಪ್ರಾರ್ಥನೆ ಹಾಡಿದರು. ರಾಮಕೃಷ್ಣ ಗೌಡ ವೇದಿಕೆಗೆ ಆಹ್ವಾನಿಸಿದರು. ವಸಂತ ಶೆಟ್ಟಿ ವಲಯಾಧ್ಯಕ್ಷ ರನ್ನು ಪರಿಚಯಿಸಿದರು. ಧತ್ತಾತ್ರೇಯ ಗೊಲ್ಲ ಧ್ವಜವಂದನೆ, ಅಶ್ರಫ್ ಆಲಿಕುಂಞಿ ನೀತಿ ಸಂಹಿತೆ ವಾಚಿಸಿದರು. ಕಾರ್ಯದರ್ಶಿ ಅನಂತಕೃಷ್ಣ ವರದಿ ವಾಚಿಸಿ ಬಳಿಕ ವಲಯಾಧ್ಯಕ್ಷರಿಗೆ ಹಸ್ತಾಂತರಿಸಿದರು. ಕೋಶಾಧಿಕಾರಿ ಶುಭಾಶಿಣಿ ವಂದಿಸಿದರು.
ಪೂರ್ವ ಪ್ರಾಂತ್ಯಾಧ್ಯಕ್ಷ ನಿತ್ಯಾನಂದ ನಾವರ ಅವರ ಪುತ್ರಿ ಸಿ.ಎ ಉತ್ತೀರ್ಣರಾದ ನಿಮಿತ್ತ ಭೋಜನ ವ್ಯವಸ್ಥೆಯನ್ನು ಪ್ರಾಯೋಜಿಸಿದ್ದರು.
ಸೇವಾ ಕಾರ್ಯ ನಿಮಿತ್ತ ಬಡ ಕುಟುಂಬಕ್ಕೆ ಅಕ್ಕಿ, ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ವಿತರಿಸಲಾಯಿತು.

Related posts

ಜೂ.21: ವೇಣೂರು ವಿದ್ಯುತ್ ನಿಲುಗಡೆ

Suddi Udaya

ಲಾಯಿಲ: ವಿಘ್ನೇಶ್ವರ ಕಲಾ ಮಂದಿರದಲ್ಲಿ ರಾಮ ನಾಮ ತಾರಕ ಮಂತ್ರ ಹಾಗೂ 1,111 ಹಣತೆಗಳ ಪ್ರಜ್ವಲನೆ ಸಹಿತ ಶ್ರೀ ರಾಮ ದೇವರಿಗೆ ಮಹಾ ಮಂಗಳಾರತಿ

Suddi Udaya

ಬೆಳ್ತಂಗಡಿ ವಕೀಲರ ಸಂಘದಿಂದ ಹಿರಿಯ ನ್ಯಾಯಾಧೀಶ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

47 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ; ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ: ಡಾ. ಮೋಹನ್ ಆಳ್ವ

Suddi Udaya

ಕರ್ತವ್ಯದ ವೇಳೆ ಬೆಳ್ತಂಗಡಿ ತಹಶೀಲ್ದಾ‌ರ್ ಮೇಲೆ ಹಲ್ಲೆಗೆ ಯತ್ನ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ವೃಕ್ಷಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ

Suddi Udaya
error: Content is protected !!