ಲಾಯಿಲ: ಸ್ವಾತಂತ್ರ ವೀರ ಭಗತ್ ಸಿಂಗ್ ಇವರ 116 ನೇ ಜನುಮ ದಿನಾಚರಣೆ

Suddi Udaya

ಲಾಯಿಲ: ಸ್ವಾತಂತ್ರ ವೀರ ಭಗತ್ ಸಿಂಗ್ ಇವರ 116 ನೇ ಜನುಮ ದಿನಾಚರಣೆಯನ್ನು ಲಾಯಿಲ “ಭಗತ್ ಸಿಂಗ್” ವೃತ್ತದಲ್ಲಿ ಆಚರಿಸಲಾಯಿತು. ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರನ್ನು ಸ್ಮರಿಸಲಾಯಿತು.

ಲಾಯಿಲ ಗ್ರಾ.ಪಂ. ಸದಸ್ಯರಾದ ಅರವಿಂದ್ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಯೋಜನಾಧಿಕಾರಿ ರಾಮ್ ಕುಮಾರ್ ಮರ್ನಾಡ್ ಇವರು ಭಗತ್ ಸಿಂಗ್ ಇವರ ಜೀವನ ಚರಿತ್ರೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಲಾಯಿಲ ಜಂಕ್ಷನ್ ನಲ್ಲಿ ವೃತ್ತ ನಿರ್ಮಾಣ ಮಾಡಿದ ಹಿರಿಯರನ್ನು ಗೌರವಿಸಿ ಭಗತ್ ಸಿಂಗ್ ಇವರ ಜೀವನವನ್ನು ಆದರ್ಶವಾಗಿ ತೆಗೆದುಕೊಂಡು ನಾವು ಸಾಗಬೇಕು ಎಂದು ಜಗದೀಶ್ ಕನ್ನಾಜೆ ತಿಳಿಸಿದರು.

ಕಾರ್ಯಕ್ರಮದಲ್ಲಿ , ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಇದರ ಗೌರವ ಅಧ್ಯಕ್ಷರಾದ ಪ್ರಕಾಶ್ ಕಾಶಿಬೆಟ್ಟು, ಸಮಿತಿಯ ಸದಸ್ಯರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಇದರ ಸದಸ್ಯರು ಲಾಯಿಲ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂದಳ ಘಟಕದ ಕಾರ್ಯಕರ್ತ ಬಂಧುಗಳು, ನಗರ ಪಂಚಾಯತ್ ಸದಸ್ಯರಾದ ಶರತ್ ಕುಮಾರ್ , ಮೋಹನ್ ಭಟ್ ಗುರಿಂಗಾನ ,ಮತ್ತು ಊರಿನ ನಾಗರಿಕರು ಭಾಗವಹಿಸಿದರು.

ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಗಣೇಶ್ ಇವರು ಧನ್ಯವಾದಗೈದರು.

Leave a Comment

error: Content is protected !!