ಗೇರುಕಟ್ಟೆ : ಕಳಿಯ ಗ್ರಾಮದ ಫ್ರೆಂಡ್ಸ್ ರೇಷ್ಮೆ ರೋಡ್ ವಾಲಿಬಾಲ್ ಅಸೋಸಿಯೇಷನ್ ಬೆಳ್ತಂಗಡಿ ಸಹಭಾಗಿತ್ವದಲ್ಲಿ ತಾಲೂಕು ಮಟ್ಟದ ಸ್ಟಿಲ್ ಮಾದರಿಯ ವಾಲಿಬಾಲ್ ಅ.1 ರಂದು ರೇಷ್ಮೆ ರೋಡ್ ಕ್ರೀಡಾಂಗಣದಲ್ಲಿ ನಡೆಯಿತು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್. ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಶುಭ ಹಾರಿಸಿದರು. ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ವಾಲಿಬಾಲ್ ಆಟಗಾರ ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕಳಿಯ ಗ್ರಾ.ಪಂ.ಸದಸ್ಯ ಸುಧಾಕರ ಮಜಲು, ಕಳಿಯ ಗ್ರಾ.ಪಂ.ಸದಸ್ಯ ಯಶೋಧರ ಶೆಟ್ಟಿ ಕೊರಂಜ ,ವಾಲಿಬಾಲ್ ಹಿರಿಯ ಆಟಗಾರ ಎಮ್.ಎ.ಎಮ್.ಪಿಯೇಡ್ ಪದವಿಧರ ಸುರೇಶ್ ಕುಮಾರ್ ಆರ್.ಎನ್.ಗೇರುಕಟ್ಟೆ, ಕೊಂಕಣ್ ರೈಲ್ವೇ ಹೆಚ್.ಟಿ.ಟಿ.ಇ. ಅಧಿಕಾರಿ ಮಂಗಳೂರು, ಸತೀಶ್ ಕುಮಾರ್ ಆರ್.ಎನ್.ಗೇರುಕಟ್ಚೆ, ಭಾರತೀಯ ಭೂಸೇನೆ ನಿವೃತ್ತ ಯೋಧ ಸುಭ್ರಮಣಿ ,ಗೇರುಕಟ್ಟೆ ಜಿ.ಎ.ಸುಪಾರಿ ಟ್ರೇಡರ್ಸ್ ಮಾಲಕ ಮನ್ಸೂರ್, ಸುಲ್ಕೇರಿ ಶ್ರೀ ರಾಮ ಫ್ರೌಡಶಾಲಾ ಶಿಕ್ಷಕ ಸತೀಶ್ ಕುಮಾರ್ ಎನ್.ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ.ಘಟಕ ದಿನಕರ್, ಸುದೇಶ್ ಗೌಡ ರೇಷ್ಮೆರೋಡ್, ಹಿರಿಯ ಆಟಗಾರ ಅಶೋಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕಿನ ಸುಮಾರು 24 ತಂಡದ ವಾಲಿಬಾಲ್ ಆಟಗಾರರು ಭಾಗವಹಿಸಿದರು. ಕಾರ್ಯಕ್ರಮ ಸಂಘಟಕರಾದ ಸುದೇಶ್,ಅಭಿ ಶೆಟ್ಟಿ, ಪ್ರತೀಕ್ ಹಾಗೂ ಪ್ರೇಂಡ್ಸ್ ರೇಷ್ಮೆರೋಡ್ ಮತ್ತು ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದು,ಸಹಕರಿಸಿದರು.
ಕಾರ್ಯಕ್ರಮ ಸಂಘಟಕ ರಾಜೇಶ್ ನಾಯಕ್ ಸ್ವಾಗತಿಸಿದರು.