ಬೆಳ್ತಂಗಡಿ: ಬೆಳ್ತಂಗಡಿ ಬಸ್‌ನಿಲ್ದಾಣದ ಬಳಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಮುತ್ತೂಟ್ ಫೈನಾನ್ಸ್ ಬೆಳ್ತಂಗಡಿ ಶಾಖೆ, ಸಂತೆಕಟ್ಟೆಯ ಬೃಂದಾವನ ಕಾಂಪ್ಲೆಕ್ಸ್‌ಗೆ ಸ್ಥಳಂತರಗೊಂಡ ಶಾಖೆಯ ಉದ್ಘಾಟನಾ ಸಮಾರಂಭ ಅ.5 ರಂದು ಜರುಗಿತು.
ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಬಿ.ಕುಸುಮಾಧರ್ ಸ್ಥಳಾಂತರಗೊಂಡ ಶಾಖೆಯನ್ನು ದೀಪ ಬೆಳಗಿಸಿ, ಸುಮಾರು 800 ವರ್ಷಗಳ ಇತಿಹಾಸ ಇರುವ ಮುತ್ತೂಟ್ ಫೈನಾನ್ಸ್ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಸಂಸ್ಥೆಯಲ್ಲಿ ಗುಣಮಟ್ಟದ ಉತ್ತಮ ಸೇವೆ ದೊರೆಯಬೇಕು, ಗ್ರಾಹಕರ ವಿಶ್ವಾಸ ಗಳಿಸಿದಾಗ ಸಂಸ್ಥೆ ಬೆಳೆಯುತ್ತದೆ ಎಂದರು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯ ಶರತ್ ಕುಮಾರ್ ಶೆಟ್ಟಿ ಕ್ಯಾಶ್ ಕೌಂಟರ್‌ನ್ನು ಉದ್ಘಾಟಿಸಿ ಮಾತನಾಡಿ, ಬೆಳ್ತಂಗಡಿಯಲ್ಲಿ ಕಳೆದ 15ವರ್ಷಗಳಿಂದ ಈ ಸಂಸ್ಥೆ ಜನರ ಕಷ್ಟಗಳಿಗೆ ಸ್ಪಂದಿಸಿದೆ ಎಂದರು.
ಕಟ್ಟಡದ ಮಾಲಕ ಡಾ.ಜಗನ್ನಾಥ ಎಂ. ಅವರು ಮಾತನಾಡಿ, ಮುತ್ತೂಟ್ ಫೈನಾನ್ ತುರ್ತು ಆರ್ಥಿಕತೆ ಬೇಕಾದಾಗ ಜನರಿಗೆ ಸ್ಪಂದಿಸುವ ಸಂಸ್ಥೆಯಾಗಿ ಬೆಳೆದಿದೆ ಎಂದು ಶುಭ ಕೋರಿದರು.
ಮಂಗಳೂರು ವಿಭಾಗೀಯ ಪ್ರಬಂಧಕ ಉದಯ ಶ್ಯಾಮ್ ಖಂಡಿಗ ಅಧ್ಯಕ್ಷತೆ ವಹಿಸಿ, ಕೇರಳದ ಕೊಚ್ಚಿನ್‌ನಲ್ಲಿ ಆರಂಭಗೊಂಡ ಈ ಸಂಸ್ಥೆ ಇಂದು ದೇಶ ಹಾಗೂ ವಿದೇಶದಲ್ಲೂ ಶಾಖೆಗಳನ್ನು ಹೊಂದಿದೆ. ಇದು ಬ್ಯಾಂಕೇತರ ಸಂಸ್ಥೆಗಳಲ್ಲಿ ಆಗ್ರ ಸ್ಥಾನದಲ್ಲಿದೆ. ಕೇವಲ ವಾಣಿಜ್ಯ ವ್ಯವಹಾರವಲ್ಲದೆ, ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಂಗಳೂರು ರಿಜನಲ್ ಎಡ್ಮಿನ್ ರಾಹುಲ್ ರಾಘವನ್, ಅಡಿಟ್ ಮೆನೇಜರ್ ವೈಶಾಕ್, ಪುತ್ತೂರು ಕ್ಲಸ್ಟರ್ ಮೇಜೇಜರ್ ಸಂದೇಶ್ ಉಪಸ್ಥಿತರಿದರು. ಸಿಆರ್‌ಎಸ್ ಮೆನೇಜರ್ ಪ್ರಸಾದ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿವಾನಂದ ಕಾರ್ಯಕ್ರಮ ನಿರೂಪಿಸಿ, ಬೆಳ್ತಂಗಡಿ ಶಾಖಾಧಿಕಾರಿ ಸತ್ಯನಾರಾಯಣ ವರ್ಣ ವಂದಿಸಿದರು. ಬೆಳ್ತಂಗಡಿ ಯು.ಕೆ.ಟವರ್ ಮಾಲಕ ಯು.ಕೆ.ಮಲ್ಲ, ಪ್ರಜ್ವಲ್ ಕಾಂಪ್ಲೆಕ್ಸ್‌ನ ಮಾಲಕ ಪ್ರಮೋದ್ ಆರ್.ನಾಯಕ್, ಗ್ರಾಹಕರು, ವಿವಿಧ ಶಾಖೆಗಳ ಮೆನೇಜರ್, ಸಿಬ್ಬಂದಿಗಳು ಹಾಜರಿದ್ದರು.