24.4 C
ಪುತ್ತೂರು, ಬೆಳ್ತಂಗಡಿ
April 4, 2025
ತಾಲೂಕು ಸುದ್ದಿ

ಕಳೆಂಜದಲ್ಲಿ ಲೋಲಾಕ್ಷರ ಮನೆ ಪಂಚಾಂಗ ಕಿತ್ತೆಸೆದ ಅರಣ್ಯ ಇಲಾಖೆ:ಬಡವನ ಮೇಲೆ ಅರಣ್ಯಧಿಕಾರಿಗಳ ದೌರ್ಜನ್ಯದ ವಿರುದ್ಧ ತಿರುಗಿ ಬಿದ್ದ ಶಾಸಕರು

ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ದೇವಣ್ಣ ಗೌಡರ ಪುತ್ರ ಲೋಲಾಕ್ಷ ಎಂಬವರು ಹಳೆ ಮನೆ ತೆರವುಗೊಳಿಸಿ ನೂತನ ಮನೆ ನಿರ್ಮಾಣಕ್ಕೆ ಹಾಕಿದ ಪಂಚಾಂಗವನ್ನು ಅರಣ್ಯಾಧಿಕಾರಿಗಳು ಕಿತ್ತೆಸೆದು ದರ್ಪ ತೋರಿದ ಹಾಗೂ ಸ್ಥಳಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜ ಅವರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
ಕಳೆಂಜ ಗ್ರಾಮದ ಅಮ್ಮಿನಡ್ಕ ಕುದ್ದಮನೆ ದೇವಣ್ಣ ಗೌಡ ಎಂಬವರ ಪುತ್ರ ಲೋಲಾಕ್ಷ ಕುಟುಂಬ ಸುಮಾರು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ

ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಅ.6ರಂದು ಅರಣ್ಯ ಇಲಾಖೆ ಮನೆ ನಿರ್ಮಾಣಕ್ಕೆ ಹಾಕಿದ್ದ ಪಂಚಾಂಗವನ್ನು ಕಿತ್ತೆಸೆದು ಬಡ ಕುಟುಂಬದ ಮುಂದೆ ದರ್ಪ ತೋರಿರುವ ಬಗ್ಗೆ ತೀವ್ರ ನೊಂದು ಆತ್ಮಹತ್ಯೆಗೆ ಮುಂದಾಗಿದ್ದರು. ಘಟನೆ ವಿಚಾರ ತಿಳಿದು ಶಾಸಕ ಹರೀಶ್ ಪೂಂಜ ಅ.7 ರಂದು ಸ್ಥಳಕ್ಕೆ ಭೇಟಿ ನೀಡಿ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ಥಳದಲ್ಲೆ ಶೆಡ್ ನಿರ್ಮಾಣಕ್ಕೆ

ಮುಂದಾದರು. ಈ ವೇಳೆ ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಬಿಸಿಯೇರಿದ ಮಾತಿನ ಚಕಮಕಿ ನಡೆಯಿತು.
ಕಳೆಂಜ ಗ್ರಾಮದ ಸರ್ವೆ ನಂಬ್ರ 309 ನಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಆದರೆ ಲೋಲಾಕ್ಷ ಅವರು ಹೊಂದಿರುವ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದದಾಗ ಅರಣ್ಯ ಇಲಾಖೆ ಅವರ ಮೇಲೆ ದರ್ಪ ತೋರಿರುವುದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
309 ಸರ್ವೇ ನಂಬರ್ ನಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಆದರೆ ಇದು ಅರಣ್ಯ ಎಂದಿರುವುದರಿಂದ ಅರಣ್ಯ ಇಲಾಖೆ ಮನೆ ಕೆಡವಿದೆ. ಮನೆ ಮಂದಿಗೆ ಯಾವುದೇ ನೋಟಿಸ್ ಮಾಹಿತಿ ನೀಡದೆ ತೆರವುಗೊಳಿಸಿದ್ದಾರೆ, ಇದೇ ಸರ್ವೆ ನಂಬ್ರದಲ್ಲಿ ಎಕ್ರೆಗಟ್ಟಲೆ ಮರ ಕಡಿದವರ ಮೇಲೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕರಲ್ಲಿ ಊರವರು

ದೂರಿಕೊಂಡರು. ಈ ಸಂದರ್ಭ ಮಾತನಾಡಿದ ಶಾಸಕರು ಮನೆ ನಿರ್ಮಾಣದ ಜಾಗ ಅರಣ್ಯ ಇಲಾಖೆಗೆ ಸೇರಿದ ಜಾಗವಲ್ಲ, ಇಲ್ಲಿ ಅಡ್ಡಿಪಡಿಸುವ ಮೊದಲು ಕಂದಾಯ ಇಲಾಖೆ ಹಾಗೂ ಅರಣ್ಯ ಜಂಟಿ ಸರ್ವೇ ನಡೆಸಿ, ಇಲ್ಲಿ ತಾತ್ಕಾಲಿಕ ಮನೆ ನಿರ್ಮಾಣ ಮಾಡುತ್ತೇವೆ. ನೀವು ಜಾಗದ ಸರ್ವೆ ನಡೆಸಿ ಮನೆ ನಿರ್ಮಾಣದ ಜಾಗ ಅರಣ್ಯ ಎಂದಾದರೆ ನಾನೇ ಮನೆ ತೆರವುಗೊಳಿಸಲು ಸೂಚಿಸುತ್ತೇನೆ ಎಂದು ಶಾಸಕರು ಅರಣ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಸಮವಸ್ತ್ರ ಧರಿಸದೆ ಘಟನಾ ಸ್ಥಳಕ್ಕೆ ಆಗಮಿಸಿದ ಆರ್.ಎಫ್.ಒ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡು ಅವರನ್ನು ಅಮಾನತು ಮಾಡುವಂತೆ ಎಸಿಎಪ್‌ಗೆ ಸೂಚಿನೆ ನೀಡಿದರು. ಸ್ಥಳದಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಶಾಸಕರು ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಸಚಿವರು ಸದ್ಯ

ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಯಥಾಸ್ಥಿತಿ ಕಾಪಾಡಿ, ಜಾಗದ ಸರ್ವೇ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದರು. ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ, ಉಪ್ಪಿನಂಗಡಿ ಅರಣ್ಯಧಿಕಾರಿ ಜಯಪ್ರಕಾಶ್, ಕಳೆಂಜ ಉಪ ವಲಯರಣ್ಯಾಧಿಕಾರಿ ಪ್ರಶಾಂತ್, ಎಸ್‌ಐ ಧರ್ಮಸ್ಥಳ ಸಮರ್ಥ ಸ್ಥಳದಲ್ಲಿದ್ದರು.

Related posts

ಕರಾಯ: ನೀರು ಕುಡಿಯುವ ನೆಪದಲ್ಲಿ ಮನೆಯೊಳಗೆ ಬಂದು ಮಹಿಳೆಯ ಚಿನ್ನಾಭರಣ ದೋಚಿ ಪರಾರಿ

Suddi Udaya

ಜ್ಯೋತಿ ಆಸ್ಪತ್ರೆಗೆ ಆಳ್ವಾಸ್ ಕಾಲೇಜು ಅಡ್ಮಿಸ್ರಶನ್ ವಿಭಾಗದ ವಿದ್ಯಾರ್ಥಿಗಳು ಭೇಟಿ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ: ಉಗ್ರಾಹ ಮುಹೂರ್ತ, ವಿವಿಧ ಗ್ರಾಮಗಳಿಂದ ಆಗಮಿಸಿದ ತರಕಾರಿ, ಬೊಂಡ, ಅಕ್ಕಿ, ಅಡಿಕೆ, ತೆಂಗು ಸಮರ್ಪಣೆ,

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಎ.ಕೃಷ್ಣಪ್ಪ ಪೂಜಾರಿಯವರಿಗೆ ’ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಂದಂತಹ ಗ್ರಾಹಕರಿಗೆ ಗಿಡಗಳನ್ನು ನೀಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

Suddi Udaya
error: Content is protected !!