24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಧ.ಮಂ. ಕಾಲೇಜಿನಲ್ಲಿ ಬದುಕು ಮತ್ತು ದುರದೃಷ್ಟಿತ್ವದ ಪರಿಕಲ್ಪನೆಯಲ್ಲಿ ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ಯುವಜನರ ಪಾತ್ರ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಡಾ| ಎ.ಪಿ.ಜೆ ಅಬ್ದುಲ್ ಕಲಾಂ ರವರ ಬದುಕು ಮತ್ತು ದುರದೃಷ್ಟಿತ್ವದ ಪರಿಕಲ್ಪನೆ ಯಲ್ಲಿ ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ಯುವಜನರ ಪಾತ್ರ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸಕ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಎಸ್ ಡಿ ಎಂ ರೋಟರಿ ವೃತ್ತಿ ಮಾರ್ಗ ದರ್ಶನ ಮತ್ತು ಮಾನವ ಸಂಪನ್ಮೂಲ ಕೇಂದ್ರವು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು.

ಉಪನ್ಯಾಸಕ ಕಾರ್ಯಕ್ರಮದಲ್ಲಿ ಸಂಪನ್ಯೂಲ ವ್ಯಕ್ತಿಯಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ರಕ್ಷಣಾ ಇಲಾಖೆ ಭಾರತ ಸರಕಾರದ ಇದರಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಮತ್ತು ಡಾ ಏ.ಪಿ.ಜೆ ಅಬ್ದುಲ್ ಕಲಾಂ ರವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ರಾಷ್ಟ್ರಿಯ ಮತ್ತು ಅಂತರಾಷ್ಟ್ರಿಯ ಶಿಕ್ಷಣ ಸಂಸ್ಥೆಗಳಲ್ಲಿ ಬೆಟ್ಟಿ ನೀಡಿ ವಿದ್ಯಾರ್ಥಿಗಳು ವಿಜ್ಞಾನ ತಮ್ಮ ತಂತ್ರಜಾನದಲ್ಲಿ ಸ್ವಾವಲಂಬಿಗಳಾಗಬೇಕು ಎಂದು ಹಲವಾರು ಉಪನ್ಯಾಸ ನೀಡಿರುವ ಜಯಪ್ರಕಾಶ ರಾವ್ ಕೆ ರವರು ಡಾ| ಎ.ಪಿ.ಜೆ ಅಬ್ದುಲ್ ಕಲಾಂ ರವರ ಬದುಕು ಮತ್ತು ದುರದೃಷ್ಟಿತ್ವದ ಪರಿಕಲ್ಪನೆಯಲ್ಲಿ ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ಯುವಜನರ ಪಾತ್ರ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಡಾ ಎ.ಪಿ.ಜೆ ಅಬ್ದುಲ್ ಕಲಾಂ ರವರ ಸರಳ ಜೀವನ ಯುವಜನರನ್ನು ಪ್ರೇರೇಪಿಸುತ್ತದೆ ಮತ್ತು ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಗಳ ಅನುಷ್ಠಾನ ತ್ವರಿತ ತ್ವರಿತ ಗತಿಯ ಅಭಿವೃದಿಗೆ ಪೂರಕವಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ ಯವರು ಡಾ ಏ.ಪಿ.ಜೆ ಅಬ್ದುಲ್ ಕಲಾಂ ರವರ ಭಾರತ ಕಂಡ ಶ್ರೇಷ್ಠ ವಿಜ್ಞಾನಿ, ಅಜಾತ ಶತ್ರು ಎನಿಸಿದ ರಾಷ್ಟ್ರಪತಿ ಆಗಿದ್ದರು. ಸ್ವಾಭಿಮಾನಿ ಭಾರತ ನಿರ್ಮಾಣದಲ್ಲಿ ವಿಜ್ಞಾದ ಆವಿಸ್ಕಾರಗಳಿಗೆ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಕ ಶಕ್ತಿಯಾಗಿದ್ದರು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರಾಗಿದ್ದ ಡಾ ಟಿ ಕೃಷ್ಣ ಮೂರ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿದ್ದ ಡಾ ಎಂ ಪಿ ಶ್ರೀನಾಥ ಮತ್ತು ಕಾಲೇಜಿನ ಕುಲಸಚಿವರಾದ ಡಾ ಶಾಲಿಪ್ ಕುಮಾರಿ ಭಾಗವಹಿಸಿದ್ದರು. ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ಜೆನಿಫರ್ ಮತ್ತು ಅವರ ತಂಡ ಕಾರ್ಯಕ್ರಮ ನಿರ್ವಹಣೆ ಮಾಡಿದರು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ ಮಹೇಶ ಕುಮಾರ್ ಶೆಟ್ಟಿ ವಂದನಾರ್ಪಣೆ ಮಾಡಿದರು ಮಾನವ ಸಂಪನ್ಮೂಲ ಮತ್ತು ವೃತ್ತಿ ಮಾರ್ಗದರ್ಶನ ವಿಭಾಗದ ಸಂಯೋಜಕ ಡಾ ನಾಗರಾಜ್ ಪೂಜಾರಿ ಕಾರ್ಯಕ್ರಮ ಸಂಘಟಿಸಿದ್ದರು.

Related posts

ಆ.14: ಕಳೆಂಜ ವಿ.ಹಿಂ.ಪ. ಬಜರಂಗದಳ ಗ್ರಾಮ ಸಮಿತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ ಮತ್ತು ಧ್ವಜಾರೋಹಣ

Suddi Udaya

ರಾಜ್ಯದ ಜನರಿಗೆ ಬೆಲೆ ಏರಿಕೆ ಮೂಲಕ ಬರೆ ಎಳೆದ ಕಾಂಗ್ರೆಸ್ ಸರಕಾರ :ಉಚಿತ ಗ್ಯಾರಂಟಿಯ ಹೊರೆ ಭರಿಸಲಾದೆ ಸರ್ಕಾರ ದಿವಾಳಿ ಅಂಚಿಗೆ

Suddi Udaya

ರೆಖ್ಯ ಬಿಜೆಪಿ ಕಾರ್ಯಕರ್ತರಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಇಳಂತಿಲ ಶಾಲೆಗೆ ನುಗ್ಗಿದ ಕಳ್ಳರು: ಕಪಾಟಿನಲ್ಲಿ ಇಟ್ಟಿದ್ದ ನಗದು ಕಳವು

Suddi Udaya

ಉಜಿರೆಯ ಮಾನಸ ಜಿ ಶೆಟ್ಟಿ ರವರಿಗೆ ಪಿಎಚ್‌ಡಿ ಪದವಿ ಪ್ರಧಾನ

Suddi Udaya

ಮಾ.1 : ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಪಕ್ಷ ಸಮಾವೇಶ

Suddi Udaya
error: Content is protected !!