30.5 C
ಪುತ್ತೂರು, ಬೆಳ್ತಂಗಡಿ
April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಕೊಯ್ಯೂರು: ಆದೂರು ಪೇರಾಲಿನ ವಿಜಯ ಸ್ಟೋರ್ ಮಾಲಕ ಸಾದೂರು ಮುರಳೀಧರ ಭಟ್ ನಿಧನ

ಕೊಯ್ಯೂರು: ಕೊಯ್ಯೂರು ಗ್ರಾಮದ ಆದೂರು ಪೇರಾಲ್ ನಲ್ಲಿ ಸುಮಾರು 38 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ ಆದೂರು ಪೇರಾಲಿನ ವಿಜಯ ಸ್ಟೋರ್ ಮಾಲಕ ಸಾದೂರು ಮುರಳೀಧರ ಭಟ್ ರವರು ಇತ್ತೀಚೆಗೆ ನಿಧನಹೊಂದಿದರು.

ಇವರು ಕೊಯ್ಯೂರಿನಲ್ಲಿ ಆರಂಭವಾದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿ, ಯುವಕ ಮಂಡಲದ ಅಧ್ಯಕ್ಷರಾಗಿ , ಗೌರವಾಧ್ಯಕ್ಷರಾಗಿ, ಆದೂರು ಪೇರಾಲ್ ಮಹಮ್ಮಾಯಿ ದೈವಸ್ಥಾನದ ಗೌರವಾಧ್ಯಕ್ಷರಾಗಿ, ಊರಿನ ದೇವಸ್ಥಾನ, ದೈವಸ್ಥಾನಗಳಿಗೆ ಸಲಹೆಗಾರರಾಗಿ, ಎಲ್ಲರೊಂದಿಗೂ ಸದಾ ನಗುಮುಖ ದೊಂದಿಗೆ ಸ್ಪಂದಿಸುವ ಒಬ್ಬ ಅಜಾತಶತ್ರುವೆಂದು ಬಿಂಬಿತರಾದವರು. ಇವರು ಪ್ರಗತಿಪರ ಕೃಷಿಕರು, ನಾಟಕ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು.


ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ನಿಧನ ಸುದ್ದಿ ತಿಳಿದು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಯಾದ ರಕ್ಷಿತ್ ಶಿವರಾಮ್ ಹಾಗೂ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು- ಸದಸ್ಯರುಗಳು, ಗಣ್ಯಾದಿ ಗಣ್ಯರುಗಳೊಂದಿಗೆ ಊರಿನ ಜನರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Related posts

ಬೆಳ್ತಂಗಡಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಗಳ ಅಪಾಯಕಾರಿ ಶುಚಿಗೊಳಿಸುವಿಕೆಯನ್ನು ತಡೆಗಟ್ಟುವ ಜಿಲ್ಲಾ ಮಟ್ಟದ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಬಂಟರ ಸಂಘದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಎ.ಸದಾನಂದ ಶೆಟ್ಟಿ ರವರಿಗೆ ಗೌರವಾರ್ಪಣೆ

Suddi Udaya

ವಾಲಿಬಾಲ್ ಪಂದ್ಯಾಟ: ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡ ಪ್ರಥಮ ಸ್ಥಾನ

Suddi Udaya

ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ 77ನೇ ಹುಟ್ಟುಹಬ್ಬ ಆಚರಣೆ

Suddi Udaya

ಹಿರಿಯ ಸಾಹಿತಿ ಕೆ.ಟಿ ಗಟ್ಟಿ ನಿಧನ

Suddi Udaya

ಪಿಲ್ಯ ಶಾಲಾ ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಆಮಂತ್ರಣ ವಿಜಯ ಕುಮಾರ್ ಜೈನ್ ಆಯ್ಕೆ

Suddi Udaya
error: Content is protected !!