32.3 C
ಪುತ್ತೂರು, ಬೆಳ್ತಂಗಡಿ
April 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಕ್ಕಾರು : ಸಿಡಿಲು ಬಡಿದು ಮನೆಗೆ ಹಾನಿ


ತೆಕ್ಕಾರು :ಸಿಡಿಲು ಬಡಿದು ಮನೆಯೊಂದು ಭಾಗಶಃ ಹಾನಿಗೀಡಾದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿ ಅ.12ರಂದು ನಡೆದಿದೆ.

ಘಟನೆಯಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ. ತೆಕ್ಕಾರಿನ ಕಾಪಿಗುಡ್ಡೆಯ ತಾಹಿರಾ ಎಂಬವರ ಮನೆಗೆ ಅ.12 ರಂದು ಸಂಜೆ ಸಿಡಿಲು ಬಡಿದಿದ್ದು ಕೆಲವು ಕಡೆ ಗೋಡೆಯ ಕೆಂಪುಕಲ್ಲುಗಳೇ ಛಿದ್ರಗೊಂಡಿವೆ. ಅಲ್ಲದೇ, ಎಲ್ಲ ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯುತ್ ವಯ ಸಂಪೂರ್ಣ ಸುಟ್ಟು ಹೋಗಿದ್ದು, ಸ್ವಿಚ್ ಬೋಡ್‌ಗಳು ಗೋಡೆಯಿಂದ ಮೇಲೆದ್ದು ಬಂದು ನೇತಾಡುತ್ತಿವೆ. ಘಟನೆಯಿಂದ ಸುಮಾರು 2 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ.

ಮಳೆ, ಸಿಡಿಲು ಆರಂಭವಾದಾಗ ಮನೆ ಮಂದಿ ಅಲ್ಲೇ ಇರುವ ಸಂಬಂಧಿಕರ ಮನೆಗೆ ತೆರಳಿದ್ದು, ಸಿಡಿಲು ಬಡಿದ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಿದ್ದುದ್ದರಿಂದ ಮನೆ ಮಂದಿ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ

ಸ್ಥಳಕ್ಕೆ ತೆಕ್ಕಾರು ಗ್ರಾಮಕರಣಿಕೆ ಸಾಕಮ್ಮ ಬೇಟಿ ನೀಡಿದ್ದು ಪರಿಶೀಲನೆ ನಡೆಸಿದರೆ.

Related posts

ಕೊಕ್ಕಡ: ಅಲ್ಲಲ್ಲಿ ಮರ ಬಿದ್ದು, ವಿದ್ಯುತ್, ಮನೆಗಳಿಗೆ ಹಾನಿ: ತಕ್ಷಣ ಸ್ಪಂದಿಸಿದ ಹರೀಶ್ ಪೂಂಜ

Suddi Udaya

ಅರಸಿನಮಕ್ಕಿ ಮತ್ತೆ ಕಾಡಾನೆ ದಾಳಿ

Suddi Udaya

ಹಿರಿಯ ಹಿಮ್ಮೇಳ ವಾದಕ ಧರ್ಮಸ್ಥಳದ ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ ಪ್ರದಾನ

Suddi Udaya

ಕೊಕ್ಕಡ ಶ್ರೀ ಕ್ಷೇತ್ರ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಮಚ್ಚಿನ ಸಿ.ಎ. ಬ್ಯಾಂಕ್ ಚುನಾವಣೆ: ಸತತ ನಾಲ್ಕನೇ ಬಾರಿ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು

Suddi Udaya

ಉಜಿರೆ ಹಳೆಪೇಟೆ ಮಸೀದಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya
error: Content is protected !!