ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಉಜಿರೆ ಶ್ರೀಧ. ಮ. ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಖ್ಯಾತ ಶಿಲ್ಪಿ ಶಶಿಧರ ಆಚಾರ್ಯ ಬೆಳಾಲು ಇವರ ತಂಡದವರಿಂದ ಕಾಷ್ಠಶಿಲ್ಪ ರಚನೆ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ ಜರಗಿತು.
ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದ ಉಜಿರೆಯ ಖ್ಯಾತ ಸ್ವರ್ಣೋದ್ಯಮಿ ಆನಂದ ಆಚಾರ್ಯ ಬೆಳಾಲುರವರು ಮಾತನಾಡಿ, ಇವತ್ತು ಯಾವುದೇ ವೃತ್ತಿಗೆ ಅದರದ್ದೇ ಆದ ಮಹತ್ತ್ವವಿದೆ. ಅದರಲ್ಲೂ ಮರದ ಕೆತ್ತನೆ ಕಾರ್ಯವು ಪ್ರಸ್ತುತ ವೃತ್ತಿಯನ್ನು ಮೀರಿ ಕಲೆಯಾಗಿ ಬೆಳೆದಿದೆ. ಹಳ್ಳಿ ಪ್ರದೇಶವಾದ ಬೆಳಾಲು ಪ್ರೌಢಶಾಲೆಯಲ್ಲಿ ಆಯೋಜಿಸಿದ ಇಂತಹ ವಿಶಿಷ್ಟ ಕಾರ್ಯಕ್ರಮ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಅತಿಥಿಗಳಾಗಿ ಆಗಮಿಸಿದ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿ, ಶಿಲ್ಪಿ ಶಶಿಧರ ಆಚಾರ್ಯ ರವರು ಶುಭಹಾರೈಸಿದರು. ವೇದಿಕೆಯಲ್ಲಿ ಯೋಜನಾಧಿಕಾರಿ ಪ್ರಕಾಶ್ ಗೌಡರವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಚಿದಂಬರ ತೆಂಕಕಾರಂದೂರು, ಶಶಿಧರ ಆಚಾರ್ಯ ಬೆಳಾಲು, ವಸಂತ ಆಚಾರ್ಯ ಪಾರಳ, ಸತೀಶ ಆಚಾರ್ಯ ಬೆಳಾಲು, ಹರೀಶ ಆಚಾರ್ಯ ಬೆಳಾಲು, ಮಕ್ಕಳಾದ ಪ್ರಣವ್ ಮತ್ತು ಪೃಥ್ವೀರಾಮ್ ರವರು ಶಿಲ್ಪಿಗಳಾಗಿ ಭಾಗವಹಿಸಿದ್ದರು.
ಶಿಕ್ಷಕರ ರಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ ಹಾಗೂ ಊರಿನ ಎಲ್ಲ ಸಂಘಸಂಸ್ಥೆಗಳವರ ಸಹಕಾರದಲ್ಲಿ ಶಿಬಿರವು ಜರಗುತ್ತಿದೆ. ಶಿಬಿರಾರ್ಥಿಗಳಾದ ಪ್ರಣೀತ್ ಸ್ವಾಗತಿಸಿ, ಪುನೀತ ವಂದಿಸಿದರು, ಚಿಂತನೆ ಕಾರ್ಯಕ್ರಮ ನಿರೂಪಿಸಿದರು.