September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಚಾಲನೆ

ಬೆಳ್ತಂಗಡಿ: 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ.20ರಿಂದ 23ರವರೆಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಪಿನಾಕಿ ಬೆಳ್ತಂಗಡಿಯಲ್ಲಿ ಗಣೇಶ್ ಐತಾಳ್ ಪಂಜಿರ್ಪು ರವರ ಪೌರೋಹಿತ್ಯದಲ್ಲಿ ನಡೆಯಲಿದೆ.

ಇಂದು ಬೆಳಿಗ್ಗೆ ಗಣಹೋಮ, ಶ್ರೀ ಶಾರದ ದೇವಿಯ ಪ್ರತಿಷ್ಠೆ, ಕಣಿಯೂರು ರೈತ ಬಂಧು ಆಹಾರೋಧ್ಯಮ ಮಾಲಕ ಶಿವಶಂಕರ್ ನಾಯಕ್ ದೀಪ ಪ್ರಜ್ವಲನೆ ಗೈದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಮುಗುಳಿ ನಾರಾಯಣರಾವ್, ಅಧ್ಯಕ್ಷರಾದ ಮುರಳಿಧರ, ಕಾರ್ಯದರ್ಶಿ ನಾರಾಯಣ್ ಶೆಟ್ಟಿ, ಉಪಾಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಸಂಜೀವ. ಎನ್, ಕೋಶಾಧಿಕಾರಿ ಜನಾರ್ಧನ, ಗೌರವ ಸಲಹೆಗಾರದ ಶಂಕರ ಹೆಗ್ಡೆ, ಅರ್ಚಕರಾದ ಗಣೇಶ್ ಐತಾಲ್, ಸದಸ್ಯರಾದ ಕುಮಾರ್ ದಾಸ್ ಮತ್ತು ಜೀವಿ ಹರೀಶ್ ಉಪಸ್ಥಿತರಿದ್ದರು.

ಸಂಜೆ ಹುಣ್ಸೆಕಟ್ಟೆ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.

Related posts

ನಾಳ: ಆಟೋ ಮಾಲಕ ಚಾಲಕ ಜಾರಪ್ಪ ಶೆಟ್ಟಿ ನಿಧನ

Suddi Udaya

ಅಂತರಾಷ್ಟ್ರೀಯ ಸೌತ್ ಏಷ್ಯಾ ಟಾರ್ಗೆಟ್ ಬಾಲ್ ಪಂದ್ಯಾಟಕ್ಕೆ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನ ಸಿದ್ಧಾರ್ಥ್ ಎಂ. ಸಿ ಆಯ್ಕೆ

Suddi Udaya

ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರ ಮಾರಾಟ ಮಳಿಗೆ ಯೋಜನೆ

Suddi Udaya

ಬೆಳ್ತಂಗಡಿ: ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ ವತಿಯಿಂದ ಕೋರೆಗಾಂವ್ ವಿಜಯೋತ್ಸವ

Suddi Udaya

ಎಸ್‌ಡಿಪಿಐ ವತಿಯಿಂದ ಪೆರಾಲ್ದರಕಟ್ಟೆಯಲ್ಲಿ ಕಂಡಡ್ ಒಂಜಿದಿನ ಕ್ರೀಡಾಕೂಟ.

Suddi Udaya

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರದ ಸಾಮಾನ್ಯ ಸಭೆ

Suddi Udaya
error: Content is protected !!