September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಸರಕಾರಿ ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕ ಸೇವಾ ಸಂಸ್ಥೆಯ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕು ಸರಕಾರಿ ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕ ಸೇವಾ ಸಂಸ್ಥೆ ಬೆಳ್ತಂಗಡಿ ಇದರ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮವು ಅ.20 ರಂದು ಬೆಳ್ತಂಗಡಿ ಕಸಬಾ ಗ್ರಾಮದ ಕೆಲ್ಲಗುತ್ತು ಬಳಿಯ ಸಂಸ್ಥೆಯ ನಿವೇಶನದಲ್ಲಿ ನಡೆಯಿತು.

ಬೆಳ್ತಂಗಡಿಯ ಪುರೋಹಿತರು ಶ್ರೀಧರ ಭಟ್ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು.

ಮುಖ್ಯ ಅಥಿತಿಗಳಾಗಿ ಸ್ಥಳದಾನಿ ಶ್ರೀಮತಿ ವೀರಮ್ಮ ಅಚ್ಚಿನಡ್ಕ , ಬೆಳ್ತಂಗಡಿ ತಾ. ಕ.ರಾ.ಸ.ನೌ ಸಂಘದ ಗೌರವಾಧ್ಯಕ್ಷ ಡಾ| ಜಯಕೀರ್ತಿ ಜೈನ್, ಬೆಳ್ತಂಗಡಿ ಕರಾ.ಸ.ನೌ ಸಂಘದ ಅಧ್ಯಕ್ಷ ಕೆ. ಜಯರಾಜ್ ಜೈನ್, ಬೆಳ್ತಂಗಡಿ ಶಿಕ್ಷಣಾಧಿಕಾರಿ ಅಧ್ಯಕ್ಷ ತಾರಾಕೇಸರಿ , ಬೆಳ್ತಂಗಡಿ ಪ್ರೌಢ ಶಾಲಾ ಸ.ಶಿ ಸಂಘದ ಅಧ್ಯಕ್ಷ ರಾಧಕೃಷ್ಣ, ಬೆಳ್ತಂಗಡಿ ಗ್ರೂಪ್ ಡಿ ನೌಕರರ ಸಂಘದ ಅಧ್ಯಕ್ಷ ಶ್ರೀಮತಿ ಜಯಶೀಲ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಶ್ರೀಮತಿ ಕುಸುಮಾವತಿ, ಜೊತೆಕಾರ್ಯದರ್ಶಿ ಶ್ರೀಮತಿ ಕೆ. ವಾರಿಜ, ಕೋಶಾಧಿಕಾರಿ ಬಿ ಜಗನ್ನಿವಾಸರಾವ್, ಟ್ರಸ್ಟಿಗಳಾದ ಸೂರಪ್ಪ ಪೂಜಾರಿ , ವಸಂತ ಸುವರ್ಣ ಉಪಸ್ಥಿತರಿದ್ದರು.

ನೌಕರರ ಸಂಘದ ಅಧ್ಯಕ್ಷರು ವಿಠಲ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಪದ್ಮ ಕುಮಾರ್ ನಿರೂಪಿಸಿದರು. ಉಪಾಧ್ಯಕ್ಷ ಸನ್ಮತ್ ಕುಮಾರ್ ಧನ್ಯವಾದವಿತ್ತರು.

Related posts

ಬೆಳ್ತಂಗಡಿ: ಚಿನ್ನಯ್ಯ ಎಸ್.ಐ.ಟಿ ಕಚೇರಿಗೆ ಹಾಜರು

Suddi Udaya

ಡಿ 19-20: ಉಜಿರೆ ಶ್ರೀ ಧ.ಮಂ.ಅ.ಹಿ. ಪ್ರಾ. ಶಾಲೆಗೆ ಶಾಲಾ ಶತಮಾನೋತ್ಸವ ಸಂಭ್ರಮ

Suddi Udaya

ಅಳದಂಗಡಿ ಸಂತ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ತ್ರೋಬಾಲ್ ಪಂದ್ಯಾಟದಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಅಕ್ರಮ ದಾಸ್ತಾನು ಡಿಸೇಲ್ ಪತ್ತೆ ಪ್ರಕರಣ:ಡಿಸೇಲ್ ಹರಾಜು ಮಾಡಿದ ಕಂದಾಯ ಇಲಾಖೆ

Suddi Udaya

ಬೆಳ್ತಂಗಡಿ: ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಕಡ್ಡಾಯ

Suddi Udaya
error: Content is protected !!