24.4 C
ಪುತ್ತೂರು, ಬೆಳ್ತಂಗಡಿ
April 4, 2025
ಅಪಘಾತ

ನಾರಾವಿ ಚರ್ಚ್‌ ರೋಡ್‌ ಬಳಿ ಕಾರು ಡಿಕ್ಕಿ : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಮೃತ್ಯು

ನಾರಾವಿ : ನಾರಾವಿ ಚರ್ಚ್‌ ರೋಡ್‌ ಬಳಿ ನಾರಾವಿ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಕಾರು ಡಿಕ್ಕಿ ಹೊಡೆದು ಪಾದಚಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.

ಅ. 21 ರಂದು ರಾತ್ರಿ ಸುಮಾರು 10.50 ಗಂಟೆಗೆ ನಾರಾವಿ ಗ್ರಾಮದ ನಾರಾವಿ ಚರ್ಚ್‌ ರೋಡ್‌ ಬಳಿ ನಾರಾವಿ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ಕಾರು ನಂಬ್ರ ಕೆಎ 19 ಎಮ್‌ .ಎ 685 ಇದರ ಚಾಲಕ ಚೇತನ್ ರಾಜ್ ಎಂಬವರು ಕಾರ್ಕಳ ಕಡೆಯಿಂದ ನಾರಾವಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಒಮ್ಮೆಲೇ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ ಓಡಿಲ್ನಾಳ ಗ್ರಾಮದ ಕಟ್ಟದಬೈಲು ಮನೆ ನಿವಾಸಿ ಶ್ರೀಮತಿ ಬಬಿತಾ ಅವರ ಗಂಡ: ಸುಧಾಕರ ಪೂಜಾರಿ, ಹಾಗೂ ಮಹೇಶರವರು ನಡೆದುಕೊಂಡು ಬರುತ್ತಿರುವ ಸಮಯ ಬಬಿತರವರ ಬಲಗೈಗೆ ತಾಗಿ ಅವರ ಹಿಂದಿನಿಂದ ಬರುತ್ತಿದ್ದ ಮಹೇಶ ಎಂಬವರಿಗೆ ರಭಸದಿಂದ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ .

ಡಿಕ್ಕಿ ಹೊಡೆದ ಪರಿಣಾಮ ಮಹೇಶರವರು ರಸ್ತೆಗೆ ಬಿದ್ದು ತಲೆಗೆ, ಮುಖಕ್ಕೆ ಹಾಗೂ ಕೈ-ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು , ಪ್ರಜ್ಙಾ ಹೀನರಾಗಿದ್ದವರನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ. ಎಂ. ಸಿ ಆಸ್ಪತ್ರೆಗೆ ಕರೆದು ಹೋದಾಗ ವೈದ್ಯರು ಪರೀಕ್ಷಿಸಿ ಮಹೇಶರವರು ಮೃತಪಟ್ಟಿರುವುದಾಗಿ ತಿಳಿಸಿದರು.

ಕೈಗೆ ಗಾಯದ ಬಬಿತಾ ಅವರು ಅ. 22 ರಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರು ಚಾಲಕ ಚೇತನ್ ರಾಜ್ ಎಂಬವರ ಮೇಲೆ ವೇಣೂರು ಪೊಲೀಸ್ ಠಾಣಾ 70/2023 ಕಲಂ: 279, 337, 304(A) IPC ಕೇಸು ದಾಖಲಾಗಿದೆ.

Related posts

ಬೈಕ್ ಅಪಘಾತ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅಶೋಕ ಕುಮಾರ್ ನಿಧನ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಎರಡು ಅಪಘಾತ: ಇಬ್ಬರಿಗೆ ಗಾಯ

Suddi Udaya

ಇಳಂತಿಲ: ವಿದ್ಯುತ್ ಅವಘಡದಿಂದ ಯುವಕ ಸಾವು

Suddi Udaya

ಗುಂಡ್ಯ: ನಿಂತಿದ್ದ ಕಾರಿನ ಮೇಲೆ ಮಗುಚಿ ಬಿದ್ದ ಕಂಟೇನರ್: ಪ್ರಾಣಾಪಾಯದಿಂದ ಪಾರಾದ ಐವರು

Suddi Udaya

ವಿಪರೀತ ಗಾಳಿ ಮಳೆ: ನೇಲ್ಯಡ್ಕ ಕೆ.ವಿ. ಅಬ್ರಹಾಂ ರವರ ಮನೆಗೆ ಬಿದ್ದ ವಿದ್ಯುತ್ ಕಂಬ

Suddi Udaya

ಬೆಳ್ತಂಗಡಿಯಲ್ಲಿ ಸರಣಿ ಅಪಘಾತ: ಎರಡು ಬಸ್ಸು ಸೇರಿದಂತೆ 7 ವಾಹನಗಳಿಗೆ ಡಿಕ್ಕಿ ಹೊಡೆದ ಲಾರಿ: ಯುವತಿ ಗಂಭೀರ

Suddi Udaya
error: Content is protected !!