22.8 C
ಪುತ್ತೂರು, ಬೆಳ್ತಂಗಡಿ
April 4, 2025
ನಿಧನ

ಸಿಪಿಐಎಂ ಮುಖಂಡ, ಪಕ್ಷದ‌ ಹಿರಿಯ ನಾಯಕ ಯಲ್.ಮಂಜುನಾಥ್ ನಿಧನ

ಬೆಳ್ತಂಗಡಿ : ಸಿಪಿಐಎಂ ಮುಖಂಡ, ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪಕ್ಷದ‌ ಹಿರಿಯ ಸಂಗಾತಿ ಯಲ್.ಮಂಜುನಾಥ್ (68 ವರ್ಷ ) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಅ.23ರಂದು ಬೆಳಗಿನ‌ ಜಾವ ಆಸ್ಪತ್ರೆಯಲ್ಲಿ ಮೃತರಾದರು.


1970 ದಶಕದಿಂದ ಕಾಮ್ರೇಡ್ ಕೆ.ವಿ.ರಾವ್. (ಎಳ್ಚಿತ್ತಾಯ) ಅವರ‌ ಜೊತೆ ಕಮ್ಯುನಿಸ್ಟ್ ಚಳವಳಿಯಲ್ಲಿ ಇವರು ಗುರುತಿಸಿಕೊಂಡಿದ್ದರು. ಉಳುವವನೇ ಹೊಲದೊಡೆಯ , ಅಕ್ರಮ‌ಸಕ್ರಮ ಮೊದಲಾದ‌ ರೈತ‌ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಅವರು ಹಲವು ಕೇಸುಗಳನ್ನು ಎದುರಿಸಿ, ಜೈಲುವಾಸವನ್ನು ಅನುಭವಿಸಿದ್ದರು.
ಬೀಡಿ ಕಾರ್ಮಿಕ‌ ಚಳವಳಿಯನ್ನು ಬೆಳ್ತಂಗಡಿಯಲ್ಲಿ ಹುಟ್ಟು ಹಾಕಿದವರಲ್ಲಿ ಪ್ರಮುಖರಾಗಿ , ಸಮರ ದೀರ ಹೋರಾಟಗಾರರಾದ ಇವರು, ಬೆಳ್ತಂಗಡಿಯಲ್ಲಿ 1998 ರಲ್ಲೇ ಕಟ್ಟಡ ಕಾರ್ಮಿಕ‌ ಸಂಘಟನೆ, 2003 ರಲ್ಲೇ ಬಿಸಿಯೂಟ ಸಂಘಟನೆಗಳ ಕಟ್ಟಿ ಬೆಳೆಸಲು ಶ್ರಮಿಸಿದವರಲ್ಲಿ ಮುಂಚೂಣಿಯಲ್ಲಿದ್ದರು. ಅವರು ಅಟೋ, ಸಾರಿಗೆ, ಅಂಗನವಾಡಿ, ಮೊದಲಾದ‌ ಸಂಘಟನೆಗಳಲ್ಲೂ, ಮೈಕ್ರೋ ಪೈನಾನ್ಸ್‌ ದೌರ್ಜನ್ಯದ ವಿರುದ್ದ ನಡೆದ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶೊಷಕರ ಪಾಲಿಗೆ ಸಿಂಹ ಸ್ವಪ್ನರಾಗಿದ್ದ ಅವರು ಕಾರ್ಮಿಕರ ಪರ ರಾಜಿ ಇಲ್ಲದ ಹೋರಾಟಗಾರರಾಗಿದ್ದರು. ರೈತರಿಗೆ ಕಾರ್ಮಿಕರಿಗೆ ಅನ್ಯಾಯ, ಮೋಸ ಮಾಡಿದವರ ವಿರುದ್ದ ಸಿಡಿದೇಳುತ್ತಿದ್ದ ಅವರು ನ್ಯಾಯ ಸಿಗದೆ ಬಿಡುತ್ತಿರಲಿಲ್ಲ.
ಮಂಜುನಾಥ್ ಅವರ ಈ ಅಗಲಿಕೆ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟ ಎಂದು ಸಿಪಿಐಎಂ ಬೆಳ್ತಂಗಡಿ ತಾ. ಸಮಿತಿ ನಾಯಕ ಬಿ.ಎಂ.ಭಟ್ ಸಂತಾಪ ಸೂಚಿಸಿದ್ದಾರೆ.
ಮೃತ ಕಾಮ್ರೇಡ್ ಎಲ್. ಮಂಜುನಾಥ್ ಅವರ ಅಂತಿಮ‌ ದರ್ಶನಕ್ಕೆ ಮೃತರ ಮನೆ ಲ್ಯಾಲದ‌ ಕೊಯ್ಯೂರು ಕ್ರಾಸ್ ನ ಕೆ.ಕೆ.ವನದಲ್ಲಿ ಬೆಳಿಗ್ಗೆ ಗಂಟೆ 7 ರಿಂದ 11 ಗಂಟೆ ತನಕ ಅವಕಾಶ ನೀಡಲಾಗುವುದು. ಬಳಿಕ ಪಕ್ಷದ ಗೌರವದೊಂದಿಗೆ ಅಂತ್ಯ ಕ್ರಿಯೆ ನಡೆಸಲಾಗುವುದು— ಬಿ.ಎಂ.ಭಟ್
ಹೇಳಿದ್ದಾರೆ.
ಮೃತರು ಪತ್ನಿ ಪ್ರಭಾವತಿ ಬಂಧು ವಗ೯ದವರನ್ನು ಅಗಲಿದ್ದಾರೆ.

Related posts

ಕಳೆಂಜ: ಕೃಷಿಕ ಪೆರ್ನು ಗೌಡ ನಿಧನ

Suddi Udaya

ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ ನಿಧನ

Suddi Udaya

ಬೆಳ್ತಂಗಡಿ: ನಿವೃತ್ತ ಶಿಕ್ಷಕಿ ಮೇರಿ ಗ್ರೇಸ್ ಮೋರಿಸ್ ನಿಧನ

Suddi Udaya

ವೇಣೂರು: ಬರ್ಕಜೆ ದೆತ್ತರ ನದಿಗೆ ಸ್ನಾನಕ್ಕೆ ತೆರಳಿದ ಮೂವರು ವಿದ್ಯಾರ್ಥಿಗಳು ನೀರುಪಾಲು

Suddi Udaya

ನಿಧನ :ಬೆಳ್ತಂಗಡಿ ಹಳೆಕೋಟೆ ನಿವಾಸಿ ಪದ್ಮಿನಿ ನಿಧನ

Suddi Udaya

ಮುಂಡಾಜೆ ಗೋಪಾಲ ಶಾಸ್ತ್ರಿ ನಿಧನ

Suddi Udaya
error: Content is protected !!