24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜಯದಶಮಿಯ ವಿಶೇಷ ಪೂಜೆ ಹಾಗೂ ಆಡಳಿತ ಟ್ರಸ್ಟ್ ವತಿಯಿಂದ ಊರವರ ಭಕ್ತರ ಸಭೆ

ಬಾರ್ಯ : ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅ.24 ವಿಜಯದಶಮಿಯಂದು ವಾಹನ ಪೂಜೆ ಹಾಗೂ ಮಹಾವಿಷ್ಣು ದೇವರ ವಿಶೇಷ ಪೂಜೆ ನಡೆದು ಭಾಸ್ಕರ್ ಬಾರ್ಯರವರು ಒಳಿತಿಗಾಗಿ ಪ್ರಾರ್ಥಿಸಿದರು. ನಂತರ ಆಡಳಿತ ಟ್ರಸ್ಟ್ ವತಿಯಿಂದ ಊರವರ ಭಕ್ತರ ಸಭೆ ಜರಗಿತು.

ಬೈಲುವಾರು ಸಮಿತಿಯನ್ನು ಮತ್ತಷ್ಟು ಸಕ್ರಿಯಗೊಳಿಸಿ ಚುರುಕಾಗಿಸಿ ದೇವಸ್ಥಾನದ ಅಭಿವೃದ್ಧಿಗೆ ತೊಡಗಿಸಿಕೊಂಡು ಸದಾ ಕ್ರಿಯಾಶೀಲವಾಗಿರುವಂತೆ ಹಾಗೂ ದೇವಸ್ಥಾನದ ಸ್ವಚ್ಛತಾ ಕಾರ್ಯದಲ್ಲಿ ತೋಡಗಿಸಿಕೊಳ್ಳುವುದು ಮತ್ತಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಟ್ರಸ್ಟ್ ಪ್ರಮುಖರ ಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವ ಎಲ್ಲಾ ಬೈಲುವಾರು ಸಮಿತಿಯ ಭಕ್ತರಿಗೆ ಸೇಸಪ್ಪ ಸಾಲ್ಯಾನ್ ಬಾರ್ಯ ಕೃತಜ್ಞತೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಂದರ ನುರಿತ್ತಾಯ ಮುಂದಿನ ಅಭಿವೃದ್ಧಿ ಯೋಜನೆ ಬಗ್ಗೆ ತಿಳಿಸಿ ಸರ್ವರ ಸಹಕಾರ ಯಾಚಿಸಿದರು.

ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಪರ್ಂದ ಗುತ್ತು, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪೈ, ಟ್ರಸ್ಟಿ ರಾಜೇಶ್ ರಾವ್, ಜೀರ್ಣೋದ್ಧಾರ ಸಮಿತಿಯ ಪ್ರಮುಖರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮನೋಹರ್ ಶೆಟ್ಟಿ ಬಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಿಯ ಹರಕೆ ಸೀರೆ ಹರಾಜು ಮಾಡಲಾಯಿತು.

Related posts

ಅಕ್ರಮ ಕಲ್ಲು ಕೋರೆ ವಿಷಯದಲ್ಲಿ ದಾಖಲಾದ ಎರಡು ಪ್ರಕರಣ: ರದ್ದುಗೊಳಿಸುವಂತೆ ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Suddi Udaya

ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

Suddi Udaya

ಕುವೆಟ್ಟು: ಸ. ಉ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಧರ್ಮಸ್ಥಳದ ಸಂತೋಷ್ ಆಚಾರ್ಯ ಮತ್ತು ಕೇಶವ ಪೂಜಾರಿ ಖುಲಾಸೆ

Suddi Udaya

ಉಜಿರೆ ಹಳೆಪೇಟೆ ಮಸೀದಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya

ಕಳಿಯ : ಕೃಷಿಕ ಅಣ್ಣು ಗೌಡ ನಿಧನ

Suddi Udaya
error: Content is protected !!